ಕಲಬುರಗಿ:- ಜಿಲ್ಲೆಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಇವತ್ತು ಸಂಸದ ಉಮೇಶ್ ಜಾಧವ್ ಮುತ್ತಿನ ಹಾರ ನೀಡಿ ಗೌರವಿಸಿ ನಂತ್ರ ಆಶೀರ್ವಾದ ಮಾಡುವಂತೆ ಕೇಳಿದ್ರು..
ಈವೇಳೆ ನಸುನಕ್ಕ ನಮೋ ಜಾಧವ್ ಬೆನ್ನಿಗೆ ಗುದ್ದಿದರು..ನಗರದ ಎನ್ ವಿ ಮೈದಾನದಲ್ಲಿ ನಡೆದ ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಇಂತಹದೊಂದು ಅಪರೂಪದ ಸೀನ್ ಕಂಡುಬಂತು.
ಸರದಿ ಸಾಲಲ್ಲಿ ಬಂದು ಸನ್ಮಾನಿಸಿದ ಜಾಧವ್ ತಲೆಬಾಗಿ ನಮಸ್ಕರಿಸಿದ ವೇಳೆ ಮೋದಿ ಜಾಧವ್ ಬೆನ್ನಿಗೆ ಗುದ್ದಿ ಏನೋ ಹೇಳುತ್ತಾ ನಸುನಕ್ಕರು…