ನೆಲಮಂಗಲ: ಅವರೆಲ್ಲ ರಾತ್ರಿ ಸಮಯದಲ್ಲಿ ಹಾಗೂ ಬೆಳಗ್ಗಿನ ಜಾವದಲ್ಲಿ ಹಳ್ಳಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್ ಗಾಗಿ ಭಯಾನಕ ವೀಲಿಂಗ್ ಮಾಡುತ್ತಿದ್ದ ಪುಂಡರು, ಜನರ ದೂರಿನ ಆಧಾರದ ಮೇಲೆ ಪೌರುತ್ತರಾದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಚರಣೆ ನಡೆಸಿ ವೀಲಿಂಗ್ ಪುಂಡರನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲಿ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ.
ಹೀಗೆ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕೇವಲ ಮೊಬೈಲ್ ಸ್ಟೇಟಸ್ ಹಾಗೂ ರೀಲ್ಸ್ ಮಾಡುವ ಶೋಕಿಗಾಗಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಕಾರ್ಯಚರಣೆ ಮುಂದಾದ ಪೊಲೀಸರಿಗೆ ಶಾಕ್. ಸಾಕಷ್ಟು ಬಾರಿ ಈ ಪುಂಡರನ್ನ ವಶಕ್ಕೆ ಪಡೆಯುವ ವೇಳೆ ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗುತ್ತಿದ್ದರು,
ಬೆಳಗ್ಗೆ ನಾಲ್ಕು ಗಂಟೆಗೆ ಕಾರ್ಯಚರಣೆ ಆಂಭಿಸಿದ ಸಿಪಿಐ ರಾಜೀವ್ ನೇತೃತ್ವದಲ್ಲಿ ಕಾರ್ಯಚರಣೆ ಇಳಿದ ಸಿಬ್ಬಂದಿಗಳು
ನೆಲಮಂಗಲ ತಾಲೂಕಿನ
ಇಸ್ಲಾಂಪುರ ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಭಯಾನಕ ಡೆಲ್ಲಿ ವೀಲಿಂಗ್ ಮಾಡುತ್ತಿದ್ದ 13 ಬೈಕ್ ಹಾಗೂ 20 ಮಂದಿ ಪುಂಡರನ್ನ ನೆಲಮಂಗಲ ಗ್ರಾಮಾಂತರ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಬೈಕ್ ರೈಡ್ ವೀಲಿಂಗ್ ಮಾಡುತ್ತಿದ್ದ ಪುಂಡರನ್ನ ವಶಕ್ಕೆ ಪಡೆದು ಪೈನ್ ಹಾಕಿ ಕಳಿಸಿದ್ರು, ಆದರೆ ಇಲ್ಲಿ ಇಸ್ಲಾಂಪುರದ ಬಹುತೇಕ ಯುವಕರು ತಮ್ಮ ಪೋಷಕರಿಗೆ ಯಾವುದೇ ಮಾಹಿತಿ ಇಲ್ಲದೆ ಈ ಭಯಾನಕ ವೀಲಿಂಗ್ ಮಾಡುವುದು ಇವರ ಶೋಕಿಗಾಗಿ ಅಮಾಯಕ ಜನರ ಜೀವನದ ಜೋತೆಗೆ ಆಟವಾಡುವುದು ಇವರ ಅಭ್ಯಾಸವಾಗಿತ್ತು. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಶೋಕಿಗಾಗಿ ಹಾಗೂ ರೀಲ್ಸ್ ಗಾಗಿ ಅಮಾಯಕ ಜನರ ಜೀವದ ಜೊತೆಗೆ ತಮ್ಮ ಪ್ರಾಣವನ್ನ ಪಣಕಿಟ್ಟು ಕೇವಲ ಮೋಜು ಮಸ್ತಿಯನ್ನೇ ಮಾಡುತ್ತಿದ್ದವರನ್ನ ಪೊಲೀಸರು ಯಡೆಮುರಿಕಟ್ಟಿದ್ದಾರೆ. ಇನ್ನಾದರು ಪೋಷಕರು ತಮ್ಮ ಮಕ್ಕಳ ಬಗ್ಗೆ ಕ್ರಮ ವಹಿಸದಿದ್ರೆ ಮುಂದೆ ಬಾರಿ ಪ್ರಮಾಣದ ಅನಾಹುತ ಅನುಭವಿಸವುದು ಎಚ್ಚರಿಕೆ ವಹಿಸಬೇಕಿದೆ..