ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಹೆಸರನ್ನು ಮಾರ್ಪಡಿಸುವ ಸುಳಿವನ್ನು ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರಿನಲ್ಲಿರುವ ‘ಬೆಂಗಳೂರು’ ಇದರ ಇಂಗ್ಲಿಷ್ ಸ್ಪೆಲಿಂಗ್ ನಲ್ಲಿ ಮಾರ್ಪಾಡು ಮಾಡುವ ಸೂಚನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಂಡವು ಹಂಚಿಕೊಂಡಿರುವ ವೀಡಿಯೊವೊಂದು ನೀಡಿದೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಂದಿನಿಂದ ಇಂದಿನವರೆಗೂ ತಂಡದ ಹೆಸರು “Royal Challengers Bangalore” ಎಂಬುದಾಗಿಯೇ ಇದೆ. 2014ರಲ್ಲಿ ಬೆಂಗಳೂರಿನ ಇಂಗ್ಲಿಷ್ ಸ್ಪೆಲಿಂಗ್ Bangalore” ನಿಂದ “Bengaluru” ಎಂಬುದಾಗಿ ಅಧಿಕೃತವಾಗಿ ಬದಲಾಯಿತು. ಅದರ ನಂತರವೂ ತಂಡದ ಹೆಸರು ಮೊದಲಿನಂತೆಯೇ ಮುಂದುವರಿದಿದೆ.
ಆದರೆ, ಈಗ 2024ನೇ ಐಪಿಎಲ್ ಋತುವಿಗೆ ಮುನ್ನ ಇಂಗ್ಲಿಷ್ ಸ್ಪೆಲಿಂಗ್ ಬದಲಾವಣೆ ಮಾಡುವ ಸೂಚನೆಯನ್ನು ತಂಡ ನೀಡಿದೆ.
ತಂಡಕ್ಕೆ ಈ 16 ವರ್ಷಗಳಲ್ಲಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ತಂಡದ ಅಭಿಮಾನಿಗಳು ಕೆಲವು ವರ್ಷಗಳ ಹಿಂದೆ “ಈ ಸಲ ಕಪ್ ನಮ್ದೇ” ಎಂಬ ಅಭಿಯಾನವನ್ನು ಆರಂಭಿಸಿದ್ದರು. ಆ ಅಭಿಯಾನವು ಹಲವು ವರ್ಷಗಳ ಕಾಲ ಚಾಲನೆಯಲ್ಲಿತ್ತು. ಆದರೆ, ಈಗ ಆ ಅಭಿಯಾನವೂ ನಿಂತು ಹೋಗಿದೆ!