ರಷ್ಯಾ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಆರಂಭವಾಗಿದ್ದು, ಹಾಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ರಷ್ಯಾದಲ್ಲಿ ಪ್ರಬಲ ವಿಪಕ್ಷವಿಲ್ಲದೇ ಚುನಾವಣೆ ನಡೆಯುತ್ತಿದೆ. ನಾಳೆ ಅಂದರೆ ಭಾನುವಾರದ ವರೆಗು ಚುನಾವಣೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಆನ್ ಲೈನ್ನಲ್ಲಿ ಮತಹಾಕಲು ಅವಕಾಶ ನೀಡಲಾಗಿದೆ. ಚುನಾವಣೆ ಆರಂಭವಾಗುತ್ತಿದ್ದಂತೆ ಮಾಸ್ಕೋದಲ್ಲಿ 2 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದಾರೆ.
ರತೀಶ್ ನಾಯರ್, ರಷ್ಯಾ ಒಕ್ಕೂಟದ ಕೇಂದ್ರ ಚುನಾವಣಾ ಆಯೋಗವು ಕೇರಳದಲ್ಲಿರುವ ರಷ್ಯಾದ ನಾಗರಿಕರು ತಮ್ಮ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದ್ದಾರೆ. ಮತದಾನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ನಾವು ಅಧ್ಯಕ್ಷೀಯ ಚುನಾವಣೆಯ ಚೌಕಟ್ಟಿನಲ್ಲಿ ಪ್ರಾಥಮಿಕ ಮತದಾನ ಆಯೋಜಿಸಿದ್ದೇವೆ. ಭಾರತದಲ್ಲಿ ವಾಸಿಸುವ ರಷ್ಯಾದ ಒಕ್ಕೂಟಗಳ ನಾಗರಿಕರಿಗೆ ಅವಕಾಶ ಒದಗಿಸಲು ನಾವು ಇಲ್ಲಿದ್ದೇವೆ ಎಂದು ಚೆನ್ನೈನ ಹಿರಿಯ ಕಾನ್ಸುಲ್ ಜನರಲ್ ಸೆರ್ಗೆ ಅಜುರೊವ್ ಹೇಳಿದ್ದಾರೆ.
ಭಾರತದಲ್ಲಿ ಕೇರಳ ಸಹಿತ 144 ದೇಶಗಳ 288 ಮತಗಟ್ಟೆಗಳಲ್ಲಿ ರಷ್ಯಾ ನಾಗರಿಕರಿಗೆ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ.