ಮೈಸೂರು: ರಾಜಕಾರಣವೇ ದೊಡ್ಡ ಚಾಲೆಂಜ್. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಮೈಸೂರಿನ ಮಹಾರಾಜ ಹಾಗೂ ಈ ಬಾರಿಯ ಲೋಕಸಭೆಯಲ್ಲಿ ಮೈಸೂರು – ಕೊಡಗಿನ ಲೋಕಸಭಾ ಅಭ್ಯರ್ಥಿ ಯದುವೀರ್ ಹೇಳಿದ್ದಾರೆ. ರಾಜಕೀಯಕ್ಕೆ ತಾವು ಬಂದಿರುವುದು ತೀರಾ ಆಕಸ್ಮಿಕವೇನಲ್ಲ, ರಾಜಕೀಯಕ್ಕೆ ಬರಲು ವರ್ಷದಿಂದಲೂ ತಯಾರಿ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಜೊತೆಗೆ, ತಮ್ಮ ಮೇಲೆ ಯಾರದ್ದೂ ಒತ್ತಡವಿಲ್ಲ. ಸ್ವಯಂಪ್ರೇರಿತರಾಗಿಯೇ ಜನಸೇವೆಗೆ ಧುಮುಕಿರುವುದಾಗಿ ಅವರು ತಿಳಿಸಿದ್ದಾರೆ. ಅವರ ಮಾತುಗಳ ಸಾರಾಂಶ ಇಲ್ಲಿದೆ.
Bigg Update: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್: ಜೈಲಿನಲ್ಲಿದ್ದ ಆರೋಪಿಯನ್ನೇ ವಶಕ್ಕೆ ಪಡೆದ NIA
ರಾಜಕಾರಣದಲ್ಲಿ ಟೀಕೆ- ಟಿಪ್ಪಣಿಗಳು, ವಾದ- ಪ್ರತಿವಾದಗಳು ಸಾಮಾನ್ಯವಾಗಿದ್ದು, ರಾಜಮನೆತನದಲ್ಲಿ ಬೆಳೆದ ಯದುವೀರ್ ಅವರಿಗೆ ಅದನ್ನು ಅರಗಿಸಿಕೊಳ್ಳಲಾದೀತೇ ಎಂಬ ಅನುಮಾನಗಳಿಗೂ ಅವರು ಉತ್ತರಿಸಿದ್ದಾರೆ. “ಸಾಂಬರಿನಲ್ಲಿ ಮೆಣಸಿನಕಾಯಿ ಸಿಕ್ಕಂತೆ ರಾಜಕೀಯದಲ್ಲೂ ಟೀಕೆಗಳು ಬರುತ್ತವೆ. ರಾಜಕೀಯದಲ್ಲಿ ಅಂತಹ ಸಂದರ್ಭಗಳು ಹೆಚ್ಚಿರಬಹುದು. ಅದನ್ನು ನಾವು ಜೀರ್ಣಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದಾಗ ಅದೆಲ್ಲವೂ ಸಹಜ. ಎಲ್ಲದಕ್ಕೂ ಸಿದ್ದವಾಗಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.