ಹಾವೇರಿ: ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಬಸವರಾಜ್ ಬೊಮ್ಮಾಯಿ ಹಾವೇರಿಗೆ ಆಗಮಿಸಿದ್ದು, ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ಕಾರ್ಯಕರ್ತರಿಂದ ಗ್ರ್ಯಾಂಡ್ ವೆಲ್ ಕಮ್ ಮಾಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬೊಮ್ಮಾಯಿ ಬರಮಾಡಿಕೊಂಡು ನಗರದ ರೋಟರಿ ಕಾಲೇಜಿನಿಂದ ಬಿಜೆಪಿ ಕಚೇರಿವರೆಗೂ ಭರ್ಜರಿ ರೋಡ್ ಶೋ ಮಾಡಲಾಯಿತು.
ತೆರದ ಬಿಜೆಪಿ ಪ್ರಚಾರದ ವಾಹನದಲ್ಲಿ ಬೊಮ್ಮಾಯಿ ರೋಡ್ ಶೋ ವೇಳೆ ಮೋದಿಗೆ ಜೈಕಾರ ಕೂಗಿದ್ದಾರೆ. ಬೊಮ್ಮಾಯಿಗೆ ಜಿಲ್ಲಾಧ್ಯಕ್ಷ ಅರುಣ ಪುಜಾರ,ಅರವಿಂದ ಬೆಲ್ಲದ ಹಾಗೂ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.