ಬೆಂಗಳೂರು: ಅಂದೊಂದು ಸಣ್ಣ ಕುಟುಂಬ ಗಂಡ-ಹೆಂಡತಿ ಮಗು, ಜೊತೆಗೆ ಎರಡು ನಾಯಿಗಳು. ಮದುವೆಯಾಗಿ 11 ವರ್ಷದ ಬಳಿಕ ಮಗುವಾಗಿತ್ತು. ಮಗುವಾಗೋ ಮೊದಲು ಈ ದಂಪತಿಗೆ ಮಕ್ಕಳಂತೆ ಇದ್ದಿದ್ದು ಆ ಶ್ವಾನಗಳು. ಎಲ್ಲೇ ಹೊರಗೆ ಹೊದರೂ ಜೊತೆಯಲ್ಲಿ ನಾಯಿ ಇದ್ದೆ ಇರ್ತಿತ್ತು. ಹೀಗೆ ಕಳೆದ ಮಾರ್ಚ್ 8 ರ ಶಿವರಾತ್ರಿಗೆ ಹಾಸನದ ಪುರದಮ್ಮ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದ ಈ ದಂಪತಿ ತಮ್ಮ ಪ್ರೀತಿಯ ಶ್ವಾನವೊಂದನ್ನು ಮಿಸ್ (Dog Missing) ಮಾಡಿಕೊಂಡಿದ್ದಾರೆ.
Killer BMTC: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ರಸ್ತೆ ದಾಟುವ ವೇಳೆ ಡಿಕ್ಕಿ ಹೊಡೆದ ಬಸ್
ಸಾಕು ಪ್ರಾಣಿಗಳ ಜೊತೆಗಿನ ಸಂಬಂಧವೇ ಬೇರೆಯದ್ದಾಗಿರುತ್ತದೆ. ಮೂರು ವರ್ಷದಿಂದ ಸಾಕಿದ್ದ ಡಂಬೂ ಎಂಬ ನಾಯಿ ಕಳೆದ ಶಿವರಾತ್ರಿ ಹಬ್ಬದ ದಿನ ಹಾಸನ ಅರಸೀಕೆರೆ ಹೈವೇಯಲ್ಲಿ ಮಿಸ್ ಆಗಿಬಿಟ್ಟಿದೆ. ದೇವಸ್ಥಾನಕ್ಕೆ ಅಂತಾ ಹೋಗಿದ್ದ ಅಶೋಕ್, ಅಶ್ವಿನಿ ದಂಪತಿ ಬರುವಾಗ ಹೈವೇಯಲ್ಲಿ ರೆಸ್ಟ್ ಗೆ ಅಂತಾ ಕಾರ್ ನಿಲ್ಲಿಸಿದ್ದಾಗ ಡಂಬೂ ಕೂಡ ಕಾರಿನಿಂದ ಇಳಿದಿದ್ದ. ಆದರೆ ಅದೇ ವೇಳೆ ಡಂಬೂ ಮಿಸ್ ಆಗಿಬಿಟ್ಟಿದ್ದಾನೆ. ನಾಯಿ ಕಳೆದು ಹೋಗಿದ್ದನ್ನ ಗಮಿಸಿದ ದಂಪತಿ ಸುತ್ತಮುತ್ತ ಎಲ್ಲಾ ಕಡೆ ಹುಡುಕಿದ್ದಾರೆ. ಜೊತೆಗೆ ದುಗ್ಗ ಪೊಲೀಸ್ರಿಗೂ ಮಾಹಿತಿ ನೀಡಿ ದಯಮಾಡಿ ನಾಯಿಯನ್ನ ಹುಡುಕಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಮಿಸ್ ಆಗಿದ್ದು ಎಲ್ಲಿ…!!
ಕಳೆದ ಶಿವರಾತ್ರಿ ಹಬ್ಬದ ದಿನ ಹಾಸನ ಅರಸೀಕೆರೆ ಹೈವೇಯಲ್ಲಿ ಮಿಸ್ಸಿಂಗ್
ಬೆಂಗಳೂರಿನ ಬಗಲಗುಂಟೆಯಲ್ಲಿ ವಾಸ ಮಾಡುತ್ತಿದ್ದ ಅಶೋಕ್ ಮತ್ತು ಅಶ್ವಿನಿ
ಹಾಸದ ದೇವಾಲಯ ಒಂದಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು
ಬೆಂಗಳೂರಿಗೆ ಬರುವಾಗ ಅರಸಿಕೆರೆ ಹೈವೇಯಲ್ಲಿ ರೆಸ್ಟ್ ಗೆ ಅಂತಾ ಕಾರ್ ನಿಲ್ಲಿಸಿದ್ದಾರೆ
ಈ ವೇಳೆ ನಾಯಿ “ಡಂಬೂ” ಕೂಡ ಇಳಿದಿದೆ, ಜೊತೆಲೆ ಇದೆ ಎಂದುಕೊಂಡರೆ ಕ್ಷಣಾರ್ಧದಲ್ಲಿ “ಡಂಬೂ” ಮಿಸ್
ಕಾರಿನಿಂದ ಇಳಿದ “ಡಂಬೂ” ಇಲ್ಲಿವರೆಗೂ ನಾಪತ್ತೆ
ಹತ್ತು ದಿನಗಳಿಂದ ಡಂಬೂ ಗಾಗಿ ಹುಡುಕಾಟ ನಡೆಸುತ್ತಿರುವ ಅಶೋಕ್
ಹಾಸನದ ದುಗ್ಗ ಪೊಲೀಸ್ ಠಾಣೆಗೂ ಮಾಹಿತಿ ನೀಡಿರುವ ಅಶೋಕ್ ಕುಟುಂಬ
ಮನೆಯ ಮಗುವಾಗಿದ್ದ ಡಂಬೂ ವನ್ನ ಹುಡುಕಿ ಕೊಡಿ ಎಂದು ಮನವಿ
ಡಂಬೂ ಹುಡಿಕೊಟ್ಟವರಿಗೆ ಸೂಕ್ತ ಬಹುಮಾನ ಕೂಡ ಕೊಡೋದಾಗಿ ಪ್ರಕಟಣೆ