ಕೋಲಾರ: ಊರಿನ ಗ್ರಾಮಸ್ಥರು ಸುಮಾರು ನಲವತ್ತು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳಿಗೆ ಬಳಸುತ್ತಿದ್ದ ಗೋಮಾಳ ಜಮೀನಿಗೆ ಫೆನ್ಸಿಂಗ್ ಹಾಕಿ ವಸತಿ ಶಾಲೆಗೆ ನೀಡಲು ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರ ತಾಲ್ಲೂಕಿನ ಗಾಜಲದಿನ್ನೆ ಗ್ರಾಮದಲ್ಲಿ ನಡೆದಿದೆ. ನಲವತ್ತು ವರ್ಷಗಳಿಂದ ಗಾಜಲದಿನ್ನೆ ಗ್ರಾಮಸ್ಥರು ಪೇಟೆಚಾಮನಹಳ್ಳಿ ಸೇರಿದ ಸರ್ವೇ ನಂಬರ್ 71ರಲ್ಲಿನ ಐದು ಎಕರೆ ಗೋಮಾಳ ಜಮೀನನ್ನು ಆಟದ ಮೈದಾನವಾಗಿ ಬಳಸಿಕೊಂಡು ಯುವಕರು ಕ್ರಿಡಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ,
ಜಮೀನನ್ನು ಸಾರ್ವಜನಿಕ ಆಟದ ಮೈದಾನ ಎಂದು ಖಾತೆ ಮಾಡಿಕೊಳ್ಳಲು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ, ಇದೀಗ ಏಕಾಏಕಿ ಅಟದ ಮೈದಾನ ಜಮೀನನ್ನು ಡಾ.ಎಪಿಜಿ ಅಬ್ದುಲ್ ಕಲಾಂ ವಸತಿ ಶಾಲೆಗೆ ಹಸ್ತಾಂತರ ಮಾಡಿ ಗುರುತು ಹಾಕಲು ಅಧಿಕಾರಿಗಳು ಗುತ್ತಿಗೆದಾರರು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿ ಗಾಜಲದಿನ್ನೆ ಗ್ರಾಮಸ್ಥರು ಫೆನ್ಸಿಂಗ್ ಹಾಕುವುದನ್ನು ತಡೆದು ಪ್ರತಿಭಟಿಸಿದರು. ಸೆಲ್ವಮಣಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ದೊಡ್ದ ಹಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಗಾಜಲದಿನ್ನೆ ಗ್ರಾಮದ ಹೊರವಲಯದಲ್ಲಿರುವ,
ಸರ್ವೇ 71 ರಲ್ಲಿನ ಗೋಮಾಳ ಜಮೀನನ್ನು ಆಟದ ಮೈದಾನಕ್ಕೆ ಮೀಸಲಿಡುವಂತೆ ಮನವಿ ಮಾಡಿದ್ದಿವಿ ಎಂದು ಗ್ರಾಮ ಪಂಚಾಯತಿ ಸದಸ್ಯ ಮುನಿಸ್ವಾಮಪ್ಪ ಹಾಗೂ ಜಗದೀಶ್ ಹೇಳಿದರು, ಸೆಲ್ವಮಣಿ ಅವರು ಈ ಬಗ್ಗೆ ವರದಿ ನೀಡುವಂತೆ ತಹಶಿಲ್ದಾರಿಗೆ ಸೂಚಿಸಿದರು. ಅದರಂತೆ ಅಗಿನ ತಹಶಿಲ್ದಾರ ಪರಿಶೀಲನೆ ನಡೆಸಿ ಆಟದ ಮೈದಾನಕ್ಕೆ ನೀಡಬಹುದು ಎಂದು ವರದಿ ಕೊಟ್ಟಿದ್ದರು ಆದರೆ ಇದೀಗ ಏಕಾಏಕಿ ಎರಡು ಮೂರುದಿನದಲ್ಲಿ ಪಹಣಿಯನ್ನು ಎಪಿಜಿ ಅಬ್ದುಲ್ ಕಲಾಂ ವಸತಿ ಶಾಲೆಗೆ ಮಾಡಿಕೊಂಡು ಗುರುತು ಹಾಕಿ ಫೆನ್ಸಿಂಗ್ ಹಾಕಲು ಬಂದಿದ್ದಾರೆ ಎಂದು ಆರೋಪಿಸಿ ಫೆನ್ಸಿಂಗ್ ಕಾರ್ಯಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದರು.
ಇನ್ನೂ ಮಾಹಿತಿ ತಿಳಿದು ಸ್ಥಳಕ್ಕೆ ಅಗಮಿಸಿದ ತಹಶಿಲ್ದಾರ ಹರ್ಷವರ್ಧನ ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ ವಸತಿಶಾಲೆಗೆ ಪಿಯು ಕಾಲೇಜ್ ನಿರ್ಮಿಸಲು ಮುಂದಾಗಿದ್ದು ಗೋಮಾಳ ಜಮೀನು ಆಗಿರುವುದರಿಂದ ಫೆನ್ಸಿಂಗ್ ಹಾಕಲಾಗುತ್ತಿದೆ. ಸಾರ್ವಜನಿಕ ಆಟದ ಮೈದಾನಕ್ಕೆ ಲೋಕಸಭಾ ಚುನಾವಣೆ ನಂತರ ಉಳಿದ ಗೋಮಾಳ ಜಮೀನಿನಲ್ಲಿ ಮಾಡಿಕೊಡವುದಾಗಿ ಭರವಸೆ ನೀಡಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸದಂತೆ ಗ್ರಾಮಸ್ಥರಿಗೆ ಸೂಚಿಸಿದರು.
ಆದರೆ ತಹಶಿಲ್ದಾರ ಮಾತಿಗೆ ಒಪ್ಪದ ಗ್ರಾಮಸ್ಥರು ಸುಮಾರು ಏಳು ವರ್ಷಗಳಿಂದ ಸಾರ್ವಜನಿಕ ಆಟದ ಮೈದಾನಕ್ಕೆ ಖಾತೆ ಮಾಡಿಕೊಡವುಂತೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತ ಬಂದಿದ್ದೇವೆ, ಎಲ್ಲರೂ ಸಾರ್ವಜನಿಕ ಆಟದ ಮೈದಾನಕ್ಕೆ ನಾಲ್ಕು ಎಕರೆ ಜಮೀನು ಮೀಸಲಿಡುವುದಾಗಿ ಭರವಸೆ ನೀಡಿತ್ತ ಬಂದಿದ್ದಾರೆ ಹೊರತು ಯಾವೊಂದು ಕ್ರಮ ಕ್ರಮ ಕೈಗೊಂಡಿಲ್ಲ, ಉಳಿದ ಗೋಮಾಳ ಜಮೀನಿನಲ್ಲಿ ಆಟದ ಮೈದಾನಕ್ಕೆ ಖಾತೆ ಮಾಡಿಕೊಡವುದಾದರೆ ಈಗಲೇ ಮಾಡಿಕೋಡಿ ಎಂದು ಗ್ರಾಮಸ್ಥರು ತಹಶಿಲ್ದಾರ ಅವರಲ್ಲಿ ಮನವಿ ಮಾಡಿದರು.
ಇನ್ನೂ ಗ್ರಾಮ ಪಂಚಾಯತಿ ಸದಸ್ಯ ಜಗದೀಶ್ ಮಾತನಾಡಿ ಕಸಬಾ ಹೋಬಳಿಗೆ ಸೇರಿದ ಪೇಟೆಚಾಮನಹಳ್ಳಿ ಸರ್ವೆ ನಂಬರ್ 71 ರಲ್ಲಿ ಒಟ್ಟು 41 ಎಕರೆ ಇದ್ದು ಇದರಲ್ಲಿ ಮೋರಾಜಿ ದೇಸಾಯಿ ವಸತಿಶಾಲೆ ಕಟ್ಟಡ ನಿರ್ಮಾಣಕ್ಕೆ 3 ಎಕರೆ, ಜಿಲ್ಲಾ ತರಬೇತಿ ಸಂಸ್ಥೆಗೆ 2 ಎಕರೆ, ಮೇಜರ್ ಕಮಾಂಡಿಂಗ್ ಆಫೀಸರ್ ವಸತಿ ಗೃಹಕ್ಕೆ ಎರಡು ಎಕರೆ ಮಂಜೂರಾಗಿದ್ದು ಇದರ ಹೊರತಾಗಿ ಸರ್ಕಾರಿ ಗೋಮಾಳ 15 ಎಕರೆ ಇದೆ. ಇರುವ 15 ಸರ್ಕಾರಿ ಗೋಮಾಳ ಜಮೀನಿನಲ್ಲಿ ನಾಲ್ಕು ಎಕರೆ ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಟ್ಟು ಕೊಡಲೇ ಖಾತೆ ಮಾಡಿಕೊಡವಂತೆ ಆಗ್ರಹಿಸಿದರು.
ಗ್ರಾಮಗಳಲ್ಲಿ ಆಟದ ಮೈದಾನಕ್ಕೆ ಕೊರತೆ ಉಂಟಾಗಿದೆ. ಇರುವ ಗೋಮಾಳ ಜಮೀನನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೇ ಯುವಕರು ಕ್ರೀಡಾ ಚಟುವಟಿಕೆಗಳಿಂದ ದೂರವುಳಿದು ಮೊಬೈಲ್ ಗೀಳಿಗೆ ಅಂಟಿಕೊಳ್ಳತ್ತಾರೆ ಜಿಲ್ಲಾಡಳಿತ ಗ್ರಾಮಗಳಲ್ಲಿ ಒಂದಷ್ಟು ಸರ್ಕಾರಿ ಜಮೀನನ್ನು ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಡುವಂತೆ ಗ್ರಾಮದ ವಾರಿಯರ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡದ ಯುವಕರು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಈ ಸಂಧರ್ಭದಲ್ಲಿ ದೊಡ್ಡ ಹಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು, ಗಾಜಲದಿನ್ನೆ ಗ್ರಾಮಸ್ಥರು ಸೇರಿದಂತೆ ನೂರಾರು ಯುವಕರು ಹಾಜರಿದ್ದರು.