IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಪ್ರಾಂಚೈಸಿಗಳು ಅಭ್ಯಾಸದಲ್ಲಿ ತೊಡಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿರುವ ಕನ್ನಡಿಗರ ನೆಚ್ಚಿನ ತಂಡವಾದ ಆರ್ಸಿಬಿ ಕೂಡ ಗುರುವಾರದಿಂದ ಬೆಂಗಳೂರಿನಲ್ಲಿ ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಿದೆ
ಆದರೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಇನ್ನೂ ಕೂಡ ತಂಡ ಸೇರಿಲ್ಲ. ಅವರ ಅನುಪಸ್ಥಿತಿಯಲ್ಲೇ ತಂಡ ಅಭ್ಯಾಸ ನಡೆಸುತ್ತಿದೆ.
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ ಕೊಹ್ಲಿ ತಂಡ ಸೇರಲು ಇನ್ನೂ ಕೆಲವು ದಿನಗಳಾಗುತ್ತವೆ ಎಂದು ತಿಳಿದುಬಂದಿದೆ. ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಅಲ್ಜಾರಿ ಜೋಸೆಫ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿ ಉಳಿದ ಎಲ್ಲ ಆಟಗಾರರು ಅಭ್ಯಾಸ ನಿರತರಾಗಿದ್ದಾರೆ. ಆದರೆ ಕೊಹ್ಲಿ ಗೈರು ಎದ್ದು ಕಾಣುತ್ತಿತ್ತು. ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್ಗೆ ತೆರೆಳಿದ್ದರು. ಜನವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಲಂಡನ್ನಲ್ಲಿಯೇ ಇದ್ದಾರೆ.
ಕೊಹ್ಲಿ ಅವರು ತಂಡ ಸೇರುವುದು ಇನ್ನೂ ತಡವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿರುವ ಮಾಹಿತಿಯನ್ನು ಗಮನಿಸುವಾಗ ಕೊಹ್ಲಿ ಆರಂಭಿಕ ಹಂತದ ಐಪಿಎಲ್ ಆಡುವುದು ಅನುಮಾನ ಎನ್ನುವಂತಿದೆ.