ಕೊಲ್ಕತ್ತಾ:- ಮಮತಾ ಬ್ಯಾನರ್ಜಿ ಹಣೆಗೆ ಪೆಟ್ಟಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ ಎಕ್ಸ್ ನಲ್ಲಿ ಹಂಚಿಕೊಂಡಿದೆ. ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಮೂಲಗಳ ಪ್ರಕಾರ, ಅವರು ಮನೆಯಲ್ಲಿ ಬಿದ್ದಿದ್ದಾರೆ. ಕುಟುಂಬಸ್ಥರು, ಪಕ್ಷದ ಮುಖಂಡರು ಆಸ್ಪತ್ರೆಗೆ ಬರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ, ಕೋಲ್ಕತ್ತಾ ಮೇಯರ್ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ದಿನ ನಬಣ್ಣಗೆ ಹೋಗಿದ್ದರು. ಅಲ್ಲಿಂದ ಎಕ್ಡಾಲಿಯಾಗೆ ಹೋಗಿ ದಿವಂಗತ ಸುಬ್ರತಾ ಮುಖೋಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.