ಸೀತಾ ರಾಮಂ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಮೃಣಾಲ್ ಠಾಕೂರ್ ಸಾಕಷ್ಟು ಅವಕಾಶವನ್ನು ಭಾಚಿಕೊಳ್ಳುತ್ತಿದ್ದಾರೆ. ಸದ್ಯ ಬಾಲಿವುಡ್ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಬ್ಯುಸಿ ಆಗಿರುವ ಮೃಣಾಲ್ ಇದೀಗ ಸ್ಟಾರ್ ನಟ ಪ್ರಭಾಸ್ ಜೊತೆ ಕೆಲಸ ಮಾಡೋ ಅವಕಾಶ ಅವರಿಗೆ ಸಿಕ್ಕಿದೆ. ಈ ಚಿತ್ರಕ್ಕೆ ಸೀತಾ ರಾಮಂ ಖ್ಯಾತಿಯ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.
ಕಿರುತೆರೆಯಿಂದ ಬಣ್ಣದ ಜರ್ನಿ ಆರಂಭಿಸಿದ ಮೃಣಾಲ್ ಠಾಕೂರ್ 2014ರಲ್ಲಿ ಮರಾಠಿ ಸಿನಿಮಾಗಳಲ್ಲಿ ನಟಿಸಿದರು. 2018ರಲ್ಲಿ ‘ಲವ್ ಸೋನಿಯಾ’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮೃಣಾಲ್ ಆ ಬಳಿಕ ಮತ್ತಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಮೃಣಾಲ್ ಅದೃಷ್ಟ ಬದಲಾಗಿದ್ದು 2022ರಲ್ಲಿ ತೆರೆಕಂಡ ಸೀತಾ ರಾಮಂ ಚಿತರದ ಮೂಲಕ. ಈಗ ಅವರಿಗೆ ಮತ್ತೊಂದು ದಕ್ಷಿಣದ ಆಫರ್ ಸಿಕ್ಕಿದೆ.
ಹನು ರಾಘವಪುಡಿ ಅವರು ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಇದೆ. ಪ್ರಭಾಸ್ ಜೊತೆ ನಟಿಸಲು ಮೃಣಾಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಚಿತ್ರಕ್ಕೆ ವೈಜಯಂತಿ ಮೂವೀಸ್ ಬಂಡವಾಳ ಹೂಡುತ್ತಿದೆ.
ಹನು ರಾಘವಪುಡಿ ಹಾಗೂ ಮೃಣಾಲ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಅವರ ಜೊತೆ ಮತ್ತೆ ಕೆಲಸ ಮಾಡೋಕೆ ಮೃಣಾಲ್ಗೂ ಸಾಕಷ್ಟು ಆಸಕ್ತಿ ಇದೆ. ಹೀಗಾಗಿ ಅವರು ಆಫರ್ ನೀಡಿದ ತಕ್ಷಣ ಮೃಣಾಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.