ಇಂದು ಸಾಕಷ್ಟು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ (AI) ಗಳು ಆರಂಭವಾಗಿದೆ. ಮಾನವಿಗೆ ಸೆಡ್ಡೆ ಹೊಡೆಯಲು ಮುಂದಾಗಿರುವುದು ಸಾಕಷ್ಟು ತಲೆ ನೋವಿಗೆ ಕಾರಣವಾಗಿದೆ. ಈ ಕೃತಕ ಬುದ್ದಿಮತ್ತೆ ಮುಂದಿನ ದಿನಗಳಲ್ಲಿ ಮಾನವ ಬುದ್ಧಿಮತ್ತೆಯನ್ನ ಮೀರಿಸುತ್ತದೆ ಎಂಬ ಕಲ್ಪನೆಯು ದಶಕಗಳಿಂದ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಭವಿಷ್ಯವಾದಿಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಉತ್ಪಾದಕ ಎಐ ಪರಿಚಯದಿಂದಾಗಿ, ಈಗ ಗೂಗಲ್, ಮೆಟಾ, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ನಂತಹ ದೊಡ್ಡ ಟೆಕ್ ಕಂಪನಿಗಳು ಪ್ರಸ್ತುತ ತಮ್ಮದೇ ಆದ ಭಾಷಾ ಮಾದರಿಗಳನ್ನ ನಿರ್ಮಿಸಲು ಮತ್ತು ತಮ್ಮ ಎಐ ಪ್ಲಾಟ್ಫಾರ್ಮ್ಗಳನ್ನ ಪರಿಷ್ಕರಿಸಲು ತೀವ್ರ ಸ್ಪರ್ಧೆಯಲ್ಲಿವೆ.
ಎಐ ಕುರಿತು ಪ್ರತಿಕ್ರಿಯಿಸಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ 2029ರಲ್ಲಿ ಎಐ ಮಾನವರಿಗಿಂತ ಹೆಚ್ಚು ಬುದ್ಧಿವಂತರಾಗುವ ಸಮಯಾವಧಿ ದೂರವಿಲ್ಲ ಎಂದಿದ್ದಾರೆ.