ವಾಟರ್ ಕ್ರಾಫ್ಟ್ ಓಡಿಸುತ್ತಿದ್ದ ವೇಳೆ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ನಡೆದಿದೆ.
ತೆಲಂಗಾಣದ ವೆಂಕಟರಮಣ ಪಿಟ್ಟಲ ಮೃತ ಭಾರತೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಪಿಟ್ಟಲ ಬಾಡಿಗೆಗೆ ಪಡೆದ ಯಮಹಾ ಪರ್ಸನಲ್ ವಾಟರ್ ಕ್ರಾಫ್ಟ್ (ಪಿಡಬ್ಲ್ಯೂಸಿ) ಓಡಿಸುತ್ತಿದ್ದರು, ಅದು ಮತ್ತೊಂದು ವಾಟರ್ ಕ್ರಾಫ್ಟ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಪಿಟ್ಟಲ ಅವರು ಇಂಡಿಯಾನಾಪೊಲಿಸ್ನ ಇಂಡಿಯಾನಾ ಯೂನಿವರ್ಸಿಟಿ ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದು, ಮೇ ತಿಂಗಳಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.