ಬೆಂಗಳೂರು: ಸ್ಯಾಂಡಲ್ವುಡ್ ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮಾ ಹಾಗೂ ಡಿಫರೆಂಟ್ ಡ್ಯಾನಿ ನಡುವೆ ಜಟಾಪಟಿಯಾಗಿದೆ. ಫೈಟ್ ಮಾಸ್ಟರ್ ರವಿ ವರ್ಮಾ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ಫೈಟ್ ಮಾಸ್ಟರ್ ಆಗಿರುವ ಡ್ಯಾನಿ ಮಾಸ್ಟರ್ ಅಲಿಯಾಸ್ ಡಿಫರೆಂಟ್ ಡ್ಯಾನಿ, ಆರೋಪಿಸಿದ್ದಾರೆ.
ಈ ಕುರಿತು ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘಕ್ಕೆ ಡ್ಯಾನಿ ಮಾಸ್ಟರ್ ದೂರು ನೀಡಿ ಬಳಿಕ ಜ್ಞಾನ ಭಾರತಿ ಪೊಲೀಸ್ ಸ್ಟೇಶನ್ನಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಸದ್ಯ ಬಹಿರಂಗವಾಗಿ ಹೇಳಿಕೆ ಕೊಟ್ಟು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಡ್ಯಾನಿ ಮಾಸ್ಟರ್ ದೂರಿನಲ್ಲಿ ಜಾಕಿ ಸಿನಿಮಾದ ಫಿಲ್ಮ್ ಫೈಯರ್ ಫೈಟ್ ನಾನು ಮಾಡಿದ್ದು. ಆದರೆ ರವಿ ವರ್ಮಾ ಅವರು ಈ ಸೀನ್ ಫೈಟನ್ನು ನಾನು ಮಾಡಿದ್ದೇನೆ ಎಂದು ಪ್ರಭುದೇವ ಅವರಿಗೆ ಹೇಳಿ ಬಾಲಿವುಡ್ ಗೆ ಹೋಗಿದ್ದಾರೆ.
ರವಿವರ್ಮ ಅವರು 4-5 ಬಾರಿ ಕರೆಯನ್ನು ಮಾಡಿದ್ದರು. ಆದರೆ ಕೌಟಂಬಿಕ ಕಾರಣಗಳಿಂದ ಆ ಸಮಯದಲ್ಲಿ ವಿಷಯವನ್ನು ತಿಳಿದುಕೊಳ್ಳಲು ಆಗದೇ ಫೋನ್ ಕರೆಯನ್ನು ಸ್ವೀಕರಿಸಿರಲಿಲ್ಲ. ಮಾತ್ರವಲ್ಲ ನನ್ನ ಸಹಾಯಕನಾದ ಕೆ.ಪಿ ಮಂಜು ಅವರಿಗೆ ರವಿ ವರ್ಮಾ ಅವರು ಫೋನ್ ಮಾಡಿ ನನ್ನ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆಯ ಬೆದರಿಕೆ ಕೊಟ್ಟಿದ್ದಾರೆ ಎಂದು ಡ್ಯಾನಿ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.