ಭಾರತದಲ್ಲಿ ಬೇವನ್ನು ಸರ್ವರೋಗ ನಿವಾರಿಣಿ ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ರೋಗಗಳ ಚಿಕಿತ್ಸೆ ನೀಡಬಲ್ಲದು ಎಂದರ್ಥ. ಇದರ ಹೊರತಾಗಿ ಬೇವಿಗೆ ಮತ್ತೊಂದು ಹೆಸರನ್ನು ನೀಡಲಾಗಿದೆ. ಅದುವೆ ಅರಿಷ್ಠ. ಅಂದರೆ ರೋಗಗಳಿಂದ ವಿಮೋಚನೆ. ಬೇವಿನ ಮರದ ಬೇರುಗಳಿಂದ ಕಾಂಡದವರೆಗೆ ಮತ್ತು ಹೂವಿನಿಂದ ಹಣ್ಣಿನವರೆಗೆ ವಿವಿಧ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ.
ಇನ್ನು ತುಳಸಿ ಕೂಡ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ತುಳಸಿಯು ಔಷಧೀಯ ಗುಣಗಳಿಂದ ಕೂಡಿದೆ. ತುಳಸಿಯನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸುತ್ತಾರೆ. ತುಳಸಿ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಇನ್ಫ್ಲಮೇಟರಿ ಅಂಶಗಳಿದ್ದು, ಇದು ದೇಹವನ್ನು ಹಲವು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಸಾಕಷ್ಟು ಔಷಧೀಯ ಗುಣ ಹೊಂದಿರುವ ಈ ಎಲೆಗಳನ್ನು ಯಾವಾಗ ಬೇಕಾದ್ರೂ ಸೇವಿಸಬಹುದು. ಬೇವು ಮತ್ತು ತುಳಸಿ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ಲಾಭ ಹೆಚ್ಚು. ತುಳಸಿ ಮತ್ತು ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಖಾಲಿ ಹೊಟ್ಟೆ (Empty Stomach) ಯಲ್ಲಿ ಬೇವು (Neem) ತುಳಸಿ (Tulsi ) ಎಲೆ ಸೇವನೆಯಿಂದ ಆಗುವ ಪ್ರಯೋಜನಗಳು :
- ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ.
- ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ವಾಸ್ತವವಾಗಿ, ಅವುಗಳ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ.
- ಇದಲ್ಲದೇ ಬೇವು ಮತ್ತು ತುಳಸಿ ಎಲೆಗಳನ್ನು ಒಟ್ಟಿಗೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ವಾಸ್ತವವಾಗಿ, ಕಬ್ಬಿಣವು ಬೇವು ಮತ್ತು ತುಳಸಿ ಎಲೆಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತದ ಕೊರತೆ ಕಾಡುವುದಿಲ್ಲ.
- ತುಳಸಿ ಮತ್ತು ಬೇವಿನ ಎಲೆಯನ್ನು ಸೇವಿಸುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ಸೋಂಕು ಮುಕ್ತ ಚರ್ಮವನ್ನು ನಾವು ಪಡೆಯಬಹುದು. ಮುಖದ ಕಲೆಗಳು ಮತ್ತು ಮೊಡವೆಗಳನ್ನು ತೆಗೆಯಲು ಇದು ಸಹಕಾರಿ.
- ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ ಎನ್ನಬಹುದು. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಇದರ ಜೊತೆ ವೈರಲ್ ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು.
ಬೇವು-ತುಳಸಿ ಎಲೆಗಳನ್ನು ಹೇಗೆ ತಿನ್ನಬೇಕು ? :
ನೀವು ತುಳಸಿ ಮತ್ತು ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ನೀವು ಅದನ್ನು ನೀರಿನ ಜೊತೆ ಸೇವನೆ ಮಾಡಬಹುದು. ಇದರ ಹೊರತಾಗಿ ಬೇವಿನ ಎಲೆಗಳು ಕಹಿ ಎನ್ನಿಸಿದ್ರೆ ನೀವು ಬೆಲ್ಲ ಅಥವಾ ಜೇನುತುಪ್ಪದ ಜೊತೆ ಇದನ್ನು ಸೇವನೆ ಮಾಡಬಹುದು. ಬೇವು ಮತ್ತು ತುಳಸಿ ಎಲೆಗಳಿಂದ ತಯಾರಿಸಿದ ಚಹಾವನ್ನು ಸಹ ನೀವು ಬೆಳಿಗ್ಗೆ ಕುಡಿಯಬಹುದು. ಇದ್ರಿಂದಲೂ ಸಾಕಷ್ಟು ಪ್ರಯೋಜನವಿದೆ. ಒಂದು ಲೋಟ ನೀರಿದೆ ನಾಲ್ಕ್ನಾಲ್ಕು ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ, ಆ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಬಹುದು.