ಜಪಾನಿನ ಕಂಪನಿಯೊಂದು ತಯಾರಿಸಿದ ಖಾಸಗಿ ರಾಕೆಟ್ ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಸ್ಫೋಟಗೊಂಡಿದೆ.
ಟೋಕಿಯೋ ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಒನ್ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಉಡಾವಣೆಯಾದ 51 ನಿಮಿಷಯದಲ್ಲಿ ಉಪಗ್ರಹ ಕಕ್ಷೆಗೆ ಸೇರುವ ನಿರೀಕ್ಷೆಯನ್ನು ಸಂಸ್ಥೆ ಮಾಡಿತ್ತು. ಆದರೆ ನಿರೀಕ್ಷೆ ಉಲ್ಟ್ ಹೊಡೆದಿದೆ. ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೊದಲ ಜಪಾನಿನ ಖಾಸಗಿ ಸಂಸ್ಥೆಯ ಪ್ರಯತ್ನ ವಿಫಲವಾಗಿದೆ.
ಕೈರೋಸ್ ರಾಕೆಟ್ ಪಶ್ಚಿಮ ಜಪಾನ್ನ ವಕಯಾಮಾ ಪ್ರಿಫೆಕ್ಚರ್ನಲ್ಲಿರುವ ಸ್ಟಾರ್ಟ್ಅಪ್ನ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ಸೆಕೆಂಡುಗಳ ನಂತರ, ರಾಕೆಟ್ ಜ್ವಾಲೆಯ ಚೆಂಡಾಯಿತು. ಉಪಗ್ರಹ ಸ್ಫೋಟಗೊಂಡು ಉಡಾವಣಾ ಪ್ಯಾಡ್ ಪ್ರದೇಶದಲ್ಲಿ ಕಪ್ಪು ಹೊಗೆ ತುಂಬಿತ್ತು.
ಉಡಾವಣೆಯಾದ ಸುಮಾರು 51 ನಿಮಿಷಗಳ ಹೊತ್ತಿಗೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಭರವಸೆಯನ್ನು ಕೈರೋಸ್ ಹೊಂದಿತ್ತು. ಆದರೆ ಪ್ರಯತ್ನ ವಿಫಲವಾಗಿದೆ. ವಿಫಲತೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪೇಸ್ ಒನ್ ಸಂಸ್ಥೆ ತಿಳಿಸಿದೆ.