ಬಳ್ಳಾರಿ:– ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬ್ಬೀರ್ ವಿಚಾರಣೆ ಅಂತ್ಯ ಮಾಡಿದ್ದಾರೆ. ಅಲ್ಲದೇ ವಿಚಾರಣೆ ಬಳಿಕ ಬಿಟ್ಟು ಕಳುಹಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿಯ ಟ್ಯಾಂಕ್ ಬಂಡೂ ರಸ್ತೆಯ ನಿವಾಸಿ ಶಬ್ಬೀರ್, ಬಾಂಬರ್ನೊಂದಿಗೆ ಸಂಪರ್ಕದಲ್ಲಿದ್ದ ಎಂಬ ಅನುಮಾನದ ಮೇರೆಗೆ ಎನ್ಐಎ ಅಧಿಕಾರಿಗಳು ಮಾರ್ಚ್.13ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಳ್ಳಾರಿಗೆ ಆಗಮನಿಸಿ ಆತನನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಮಾರ್ಚ್ 01ನೇ ತಾರೀಖು ರಾತ್ರಿ 9 ಗಂಟೆ ಒಂದು ನಿಮಿಷಕ್ಕೆ ಬಳ್ಳಾರಿ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದ ಶಂಕಿತ ಬಾಂಬರ್, ಬಸ್ ನಿಲ್ದಾಣದಿಂದ ಆಟೋ ಹತ್ತಿ ಅಲ್ಲಿಂದ 500 ಮೀಟರ್ ದೂರ ಇರುವ ಬುಡಾ ಕಾಂಪ್ಲೆಕ್ಸ್ ಬಳಿ ಬಂದು ಅಲ್ಲಿ ಶಬ್ಬೀರನನ್ನ ಭೇಟಿ ಮಾಡಿದ್ದ ಎಂದು ಹೇಳಲಾಗುತ್ತಿದೆ.
ಹೀಗಾಗಿ ಸಿಸಿ ಕ್ಯಾಮರಾ ಫೋಟೋಸ್ ಆಧಾರದ ಮೇಲೆ ಶಬ್ಬೀರನನ್ನ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ತೆರಳಿ ಆತನನ್ನ ವಿಚಾರಣೆ ನಡೆಸಿದ್ದರು. ಸದ್ಯ ವಿಚಾರಣೆ ಅಂತ್ಯಗೊಂಡಿದೆ