ನಿಮ್ಮಲ್ಲಿ ಪೇಟಿಎಂ ಫಾಸ್ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನ ಫಾಸ್ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹೊಸದಾಗಿ ಹಣ ಸೇರಿಸಲಾಗುವುದಿಲ್ಲ, ರೀಚಾರ್ಜ್ ಮಾಡಲಾಗುವುದಿಲ್ಲ.
Ayodhya Ram Mandir: ಇನ್ಮುಂದೆ ದೂರದರ್ಶನದಲ್ಲಿ ಬಾಲ ರಾಮನ ಬೆಳಗ್ಗಿನ ಪೂಜೆ ನೋಡಲು ಅವಕಾಶ!
ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನಿಂದ ಫಾಸ್ಟ್ಯಾಗ್ ಪಡೆಯುವಂತೆ ಎನ್ಎಚ್ಎಐ ಮತ್ತೊಮ್ಮೆ ಅಧಿಕೃತವಾಗಿ ಸೂಚನೆ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್ಟ್ಯಾಗ್ಗೂ ಪರಿಣಾಮ ಬಿದ್ದಿದೆ. ಪೇಟಿಎಂನ ಫಾಸ್ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ