ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದನೆ: ವಿದ್ಯಾರ್ಥಿಗೆ ಮರಣದಂಡನೆ, ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ
ಪ್ರವಾದಿ ಮೊಹಮ್ಮದ್ ಹಾಗೂ ಆತನ ಪತ್ನಿಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಫೋಟೋ ಹಾಗೂ ವೀಡಿಯೊಗಳನ್ನು ಸಿದ್ಧಪಡಿಸಿದ್ದ 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ ಮತ್ತು ವಿದ್ಯಾರ್ಥಿಗೆ ಮರಣದಂಡನೆ ವಿಧಿಸಿದೆ.
ಇಬ್ಬರ ವಿದ್ಯಾರ್ಥಿಗಳ ಜೊತೆಗೆ ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದೆಯ ಆರೋಪದ ಮೇಲೆ 17 ವರ್ಷದ ಯುವತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯದ ನ್ಯಾಯಾಧೀಶರ ಆದೇಶವನ್ನು ಉಲ್ಲೇಖಿಸಿ, ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ 22 ವರ್ಷದ ವಿದ್ಯಾರ್ಥಿಯು ಧರ್ಮನಿಂದೆಯ ವಿಷಯವನ್ನು ಹಂಚಿಕೊಂಡಿದ್ದಾನೆ. ಹಾಗಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದು ಅವರು ವಕೀಲರು ಇಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ವಾದಿಸಿದರು.
ಲಾಹೋರ್ನಲ್ಲಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಸೈಬರ್ ಕ್ರೈಮ್ ಘಟಕವು 2022 ರಲ್ಲಿ ಆ ಇಬ್ಬರ ವಿರುದ್ಧ ದೂರು ದಾಖಲಿಸಿತ್ತು. ಮೂರು ವಿಭಿನ್ನ ಮೊಬೈಲ್ ಫೋನ್ ಸಂಖ್ಯೆಗಳಿಂದ ಧರ್ಮನಿಂದೆಯ ವಿಷಯವಿರುವ ವೀಡಿಯೊಗಳು ಮತ್ತು ಫೋಟೋಗಳನ್ನು ಅವರು ಸ್ವೀಕರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರನ ಫೋನ್ ಅನ್ನು ಪರಿಶೀಲಿಸಿದ ನಂತರ ಅಗೌರವ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ತನಿಖಾ ಸಂಸ್ಥೆ ದೃಢಪಡಿಸಿತು. ಮುಸಲ್ಮಾನರ ಭಾವನೆಗಳನ್ನು ಕೆರಳಿಸುವಂತಹ ಉದ್ದೇಶದೊಂದಿಗೆ ಅವರು ಈ ಕುಕೃತ್ಯವೆಸಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ತನ್ನ ಮಗನ ಮೇಲಿನ ತೀರ್ಪಿನ ವಿರುದ್ಧ ಲಾಹೋರ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವುದಾಗಿ 22 ವರ್ಷದ ವಿದ್ಯಾರ್ಥಿಯ ತಂದೆ ಬಿಬಿಸಿಗೆ ಹೇಳಿದ್ದಾರೆ.