ಗದಗ: 500 ವರ್ಷಗಳ ಸತತ ಹೋರಾಟದ ಫಲವಾಗಿ ದೇಶದ ಸಮಸ್ತ ಹಿಂದೂಗಳ ರಾಮಮಂದಿರದ ಕನಸು ಇದೀಗ ನನಸಾಗಿದ್ದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದೆ.
ಅದರಂತೆ ಇದೀಗ ಗದಗನಲ್ಲಿ ಭೀಮಂಮದಿರದ ಕೂಗು ಕೆಳಿ ಬರ್ತಾ ಇದೆ. ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಇದೀಗ ರಾಮ ಮಂದಿರದಂತೆ ಭೀಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪ ಸಾಕಾರಗೊಳಿಸಲು ಅನಿಲ್ ಮೆಣಸಿನಕಾಯಿ ಅವರ ಅಭಿಮಾನಿಗಳೂ ಕೂಡ ಸಾಥ್ ನೀಡಿದ್ದಾರೆ.
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ವೀರಶೈವ ಲಿಂಗಾಯತ ಸಮಾಜ ಹಾಗೂ ಇಸರಿ ಕುಟುಂಬ ಸಮಾನತೆ ಮಂದಿರ ನಿರ್ಮಾಣಕ್ಕೆ ತಮ್ಮ ಎರಡು ಎಕರೆ ಜಮೀನನ್ನು ನೀಡಲು ಮುಂದಾಗಿದ್ದಾರೆ. ಆ ಜಮೀನಿನಲ್ಲಿ ರಾಮ, ಭೀಮ, ಬುಧ್ಧ, ಬಸವ, ಶರೀಫರ ಮಂದಿರ ನಿರ್ಮಾಣ ಮಾಡಿ ಆ ಮೂಲಕ ಸಮಾನತೆ ಸಾರಲು ಮುಂದಾಗಿದ್ದಾರೆ.
ಚುನಾವಣೆಯಲ್ಲಿ ನನಗೆ ಜಯ ಸಿಗದಿದ್ದರೂ ಕೂಡಾ ಭಿಮ ಮಂದಿರ ನಿರ್ಮಾಣ ಮಾಡ್ತಿರೋದು ಜಯ ಸಿಕ್ಕಂತಾಗಿದೆ ಅಂತಾ ಅನಿಲ್ ಮೆಣಸಿನಕಾಯಿ ಹರ್ಷ ವ್ಯಕ್ತಪಡಿಸಿದ್ರು. ಲೋಕಸಭಾ ಚುನಾವಣೆ ಮುಗಿದ ನಂತರ ಗದಗ ಜಿಲ್ಲೆಯಾದ್ಯಂತ ಜೋಳಿಗೆ ಅಭಿಯಾನ ಮಾಡೋ ಮೂಲಕ ಮಂದಿರ ಸ್ಥಾಪನೆ ಮಾಡಲಾಗತ್ತೆ ಅಂದ್ರು.
ಮಂದಿರದಲ್ಲಿ ರಾಮ ಭಜನೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂದೇಶ, ಬಸವಣ್ಣನವರ ವಚನ ಪಠಣ, ಶರೀಫರ ಪದಗಳ ಮೂಲಕ ಸಮಾನತೆ ಸಂದೇಶ ಸಾರೋ ಕೆಲಸ ಮಾಡಲಾಗತ್ತೆ ಅಂದ್ರು