ವಿಜಯಪುರ: ಲೋಕಸಭಾ ಚುನಾವಣೆಗೆ ಎಲ್ಲಾ ಕಡೆ ಆಕಾಂಕ್ಷಿಗಳ ಫೈಟ್ ನಡೆದಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರ ಬಹಳ ಸದ್ದು ಮಾಡಿದೆ. ಹಾಗೆ ತಮ್ಮ ಸೋಲನ್ನು ಇನ್ನೊಬ್ಬರ ಮೇಲೆ ಹೊರಿಸುವುದು ಹೇಡಿತನ ಎಂದು ವಿಜಯಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುಟುಕಿದಾರೆ
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರವಾಗಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಗೊಂದಲವಿದೆ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲೋ ಕ್ಷೇತ್ರ ಹಾಗಾಗಿ ಬೇಡಿಕೆಯಿದೆ ಉಡುಪಿ ಚಿಕ್ಕಮಗಳೂರ ಕ್ಷೇತ್ರದಲ್ಲಿನ ಜನರು ನನಗೆ ಎರಡು ಬಾರಿ ಗೆಲ್ಲಿಸಿದ್ದಾರೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಮಾಡಿದ್ದಾಗಿ ಕೇಂದ್ರ ಸಚಿವೆಶೋಭಾ ಹೇಳಿದರು.
Ayodhya Ram Mandir: ಇನ್ಮುಂದೆ ದೂರದರ್ಶನದಲ್ಲಿ ಬಾಲ ರಾಮನ ಬೆಳಗ್ಗಿನ ಪೂಜೆ ನೋಡಲು ಅವಕಾಶ!
ಬೇರೆಯವರು ಟಿಕೆಟ್ ಕೊಳೋದು ತಪ್ಪಲ್ಲ ಆದರೆ ಅವಮಾನ ಮಾಡೋ ರೀತಿಯಲ್ಲಿ ಕೇಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಇದಕ್ಕೆ ಕೇಂದ್ರದ ನಾಯಕರು ಉತ್ತರ ನೀಡುತ್ತಾರೆ ಎಂದು ಸ್ಮಾರ್ಟ್ ಆಗಿ ಸಿ.ಟಿ ರವಿಗೆ ಕುಟುಕಿದರು.
ಗೋಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಅಪೇಕ್ಷಿತರು ಹೊರಗಿನವರು ಬಂದವರು ಮಾಡುತ್ತಿದ್ದಾರೆ ನಾನು ವಿಚಲಿತರಾಗಿಲ್ಲ ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ದೆ ವಿಚಾರ ಆ ಕುರಿತು ನನಗೆ ಗೊತ್ತಿಲ್ಲ ನಾನು ಪೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುವೆ ಗೆಲ್ಲುವೆ ಕಳೆದ ವಿಧಾನಸಭಾ ಚುನಾವಣೆಯಲ್ಕಿ ಕೆಲ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುಟವಟಿಕೆ ಮಾಡಿರೋ ಆರೋಪ ವಿಚಾರ ನಾನು ಯಾವುದೇ ದ್ರೋಹ ಮಾಡಿಲ್ಲ ಹೆತ್ತ ತಾಯಿಗೆ ದ್ರೋಹ ಮಾಡಿಲ್ಲ ಒಮ್ಮೆ ಪಕ್ಷದ ಟಿಕೆಟ್ ಕೊಟ್ಟರೆ ಮುಗೀತು ಅವರ ಪರವಾಗಿ ಕೆಲಸ ಮಾಡುತ್ತೇವೆಂದ ಕೇಂದ್ರ ಸಚಿವೆ
ಪಕ್ಷ ದ್ರೋಹದಂತಹಕೆಲಸ ಅವರು ಮಾಡಿರಬಹುದು ಎಂದು ವಿರೋಧಿಗಳಿಗೆ ಟಾಂಗ್ ನೀಡಿ ಹಾಗೆ ತಮ್ಮ ಸೋಲಿನ ಬಗ್ಗೆ ಇನ್ನೊಬ್ಬರ ಮೇಲೆ ಹೊರೆಸುವುದು ಹೇಡಿತನ ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಹೇಳಿದರು.