ಬೆಂಗಳೂರು:- 2019 ರಲ್ಲಿ ಸದಾನಂದ ಗೌಡ ಬಿಜೆಪಿ ಯಿಂದ ಆಯ್ಕೆ ಯಾಗಿದ್ದು ಮತ್ತೆ ನಾನು ಸ್ವರ್ಧೆ ಮಾಡಲ್ಲ ಯಾರಿಗಾದರೂ ಟಿಕೆಟ್ ಕೊಡಿ ಅಂತ ಹೇಳುತ್ತಲೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಮತೋಮ್ಮೆ ಅವಕಾಶ ಕೊಡಿ ಎಂದು ಒತ್ತಡ ಹಾಕುತ್ತಿರುವುದು ಈಗ ಚಾಲ್ತಿ ವಿಷಯ.
ಮತ್ತೊಂದು ಕಡೆ ಕಾಂಗ್ರೆಸ್ ಹೇಗಾದರೂ ಈ ಭಾರಿ ಗೆಲ್ಲಲೇ ಬೇಕೆಂದು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಇದೆ.
ಈ ಭಾರಿ ನಾವು ಕರ್ನಾಟಕದಲ್ಲಿ ಐಯ್ದು ಗ್ಯಾರಂಟಿ ಕೊಟ್ಟಿದ್ದೇವೆ. ಅವು ನಮಗೆ ಮತಗಳಾಗಿ ಪರಿವರ್ತನೆ ಆಗಿದ್ದಲ್ಲಿ ನಾವೇ ಗೆಲ್ಲುತ್ತೆವೆಂಬ ವಿಶ್ವಾಸ ದಿಂದ ಬೀಗುತ್ತಲೆ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ.
ಬಿಜೆಪಿ ಕಳೆದ 15 ವರ್ಷದ ಅವಧಿಯಲ್ಲಿ ಗೆದ್ದು ಇದು ಬಿಜೆಪಿ ಭದ್ರ ಕೋಟೆ ಈಗ ಮತ್ತ್ತೊಂದು ಸಲ ಪ್ರಧಾನಿ ಮೋದಿ ಹೆಸರಿನಲ್ಲಿ ಸುಲಭವಾಗಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಇಟ್ಟು ಕೊಂಡಿದೆ.
ಎಂಟು ವಿಧಾನ ಸಭಾ ಕ್ಷೇತ್ರ ಒಳಗೊಂಡಿದ್ದು ಈಗಾಗಲೇದಾಸರಹಳ್ಳಿ, ಮಹಾಲಕ್ಷ್ಮಿಲೆಡೌಟ್, ಮಲ್ಲೇಶ್ವರಂ, ಕೆ ಆರ್ ಪುರ ದಲ್ಲಿ ಬಿಜೆಪಿ ಶಾಸಕರಿದ್ದಾರೆ ಯಶವಂತಪುರ ಬಿಜೆಪಿ ಆಗಿದ್ದರೂ ಅಲ್ಲಿಯ ಶಾಸಕ ಇತ್ತೀಚಿಗೆ ಕಾಂಗ್ರೆಸ್ ಕಡೆ ಒಲವು ತೋರಿಸುತ್ತಿತ್ತಾರೆ.ಅದೇ ಕಾಂಗ್ರೆಸ್ ಶಾಸಕರಾಗಿ ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಪುಲಕೇಶಿ ನಗರ ಪ್ರದೇಶಗಳಿದ್ದು ಸುಮಾರು 25 ಲಕ್ಷ ಕ್ಕೂ ಹೆಚ್ಚು ಮತದಾರರಿದ್ದು ಕಳೆದ 2019 ರಲ್ಲಿ ಬಿಜೆಪಿಯ ಅಭ್ಯರ್ಥಿ 8,24,500 ಮತ ಪಡೆದು ಗೆದ್ದಿದ್ದರು. ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ 6,76982 ಮತ ಪಡೆದಿದ್ದರು. ವಿಚಿತ್ರ ಅಂದ್ರೆ ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಒಂದಾಗಿತ್ತು ಈ ಬಾರಿ ಜೆಡಿಎಸ್ ಬಿಜೆಪಿ ಒಂದಾಗೆದೆ
ಮೊದಲಿಂದರೂ ಮೇಲ್ನೋಟಕ್ಕೆ ಒಕ್ಕಲಿಗರ ಮತಗಳು ಪ್ರಾಭಲ್ಯಕಂಡು ಬಂದರೂ ಇಲ್ಲಿ ಅಲ್ಪಸಂಖ್ಯಾತರು, ಓ ಬಿ ಸಿ ಹಾಗೂ ದಲಿತ ಮತಗಳು ಹೆಚ್ಚು ನಿರ್ಣಯ ಮಾಡುತ್ತವೆ.
ಈ ಎಲ್ಲದರ ಬಗ್ಗೆ ಅರಿವು ಎರಡೂ ಪಕ್ಷಕ್ಕೆ ಇದ್ದರೂ ಅಭ್ಯರ್ಥಿ ಆಯ್ಕೆ ಕಗ್ಗಂಟು ಆಗಿರುವುದು ಸದ್ಯಕ್ಕೆ ವಿಚಿತ್ರ ವಾದರೂ ಸತ್ಯ.
ಕಾದು ನೋಡೋಣ ಯಾವ ಪಕ್ಷ ಯಾವ ಅಭ್ಯರ್ಥಿ ಆಯ್ಕೆ ಮಾಡಿ ಅಖಾಡಕ್ಕೆ ಬಿಡುತ್ತೆ ಎಂದು.