ಬೆಂಗಳೂರು: ಲೋಕಸಭೆ ಚುನಾವಣೆಗೆ 28 ಕ್ಷೇತ್ರಗಳ ಬಗ್ಗೆ ಹೈಕಮಾಂಡ್ ವಿಸ್ತೃತ ಚರ್ಚೆ ನಡೆಸಿದೆ. ಅಂತಿಮವಾಗಿ ಕೆಲವು ಹೆಸರುಗಳನ್ನು ಮೋದಿ, ಅಮಿತ್ ಷಾ ತೀರ್ಮಾನ ಮಾಡುತ್ತಾರೆ ಅದಕ್ಕೋಸ್ಕರ ವಿಜಯಣ್ಣ ಅಲ್ಲೇ ಇದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ
ನಗರದಲ್ಲಿ ದೆಹಲಿಯಿಂದ ಬಂದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಪ್ರಕಾರ ಯಾವುದೇ ಗೊಂದಲ ಇಲ್ಲ ಇಂದು ರಾತ್ರಿಯೊಳಗೆ ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ ಅಂತಾ ಅಂದುಕೊಂಡಿದ್ದೇನೆ ಅಮಿತ್ ಷಾ, ಮೋದಿ ಜೊತೆ ಮಾತಾಡಿ ವಿಜಯಣ್ಣ ಅಂತಿಮ ತೀರ್ಮಾನ ತೆಗೆದುಕೊಂಡು ಬರುತ್ತಾರೆ
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
25 ಕ್ಕಿಂತ ಹೆಚ್ಚು ಕ್ಷೇತ್ರಗಳು ಗೆದ್ದೇ ಗೆಲ್ಲುತ್ತೇವೆ ಅಚ್ಚರಿಯ ಅಭ್ಯರ್ಥಿಗಳು ಎಲ್ಲಾ ಇಂದು ರಾತ್ರಿಯೊಳಗೆ ಗೊತ್ತಾಗುತ್ತದೆ ಸುಮಲತಾ ಮಂಡ್ಯ ಟಿಕೆಟ್ ಕೇಳುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲಡಾ. ಮಂಜುನಾಥ್ ಅವರ ಹೆಸರೂ ಚರ್ಚೆಯಲ್ಲಿದೆ ಎಲ್ಲವೂ ಸಂಜೆಯೊಳಗೆ ಗೊತ್ತಾಗುತ್ತದೆ
ಹಾಲಿ ಸಂಸದರಿಗೆ ಕೈತಪ್ಪುವ ಬಗ್ಗೆ ಇಲ್ಲಿ ಚರ್ಚೆ ಮಾಡಲು ಇಷ್ಟಪಡಲ್ಲ ಹೆಚ್ಚು ಸಂಖ್ಯೆಯ ಹೆಸರು ಘೋಷಣೆ ಮಾಡಬಹುದು ಜೆಡಿಎಸ್ ಸೀಟು ಹಂಚಿಕೆ ನಿನ್ನೆ ಚರ್ಚೆ ಆಗಿಲ್ಲ ಅದು ಅಂತಿಮ ತೀರ್ಮಾನ ದೆಹಲಿಯವರು ಮಾಡುತ್ತಾರೆ. ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಡದೆ ತೆರಳಿದ Bsy