ಕಡಿಮೆ ಅವಧಿಯಲ್ಲಿ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಒಡೆತನದ ಜಿಯೋ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಸಾಕಷ್ಟು ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಜಿಯೋ ಇದೀಗ ಯುಪಿಐ ಪಾವತಿ ಮಾರುಕಟ್ಟೆಗೆ ಪ್ರವೇಶ ಮಾಡಲು ಸಿದ್ದವಾಗಿದೆ.
ಜಿಯೋ ಪೇ ಆ್ಯಪ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಸೌಂಡ್ಬಾಕ್ಸ್ ಸಹಾಯದಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಜಿಯೋ ಸೌಂಡ್ಬಾಕ್ಸ್ನ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಅಂಗಡಿಗಳಿಗೆ ಎಂಟ್ರಿಕೊಡಲಿದೆ. ಇದರೊಂದಿಗೆ ಮುಖೇಶ್ ಅಂಬಾನಿ ನೇರವಾಗಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಜೊತೆ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಅಂಗಡಿ ಮಾಲೀಕರಿಗೂ ಭರ್ಜರಿ ಆಫರ್ ಗಳನ್ನು ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪೇಟಿಎಂ ಪಾವತಿ ಬ್ಯಾಂಕ್ಗೆ ಸಂಬಂಧಿಸಿದಂತೆ ದೊಡ್ಡ ಮಾಹಿತಿಯು ಬೆಳಕಿಗೆ ಬಂದಿರುವ ಸಮಯದಲ್ಲಿ ಜಿಯೋದ ಈ ಯೋಜನೆಯು ಇತರ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸದ್ಯಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಬ್ಯಾನ್ ಮಾಡಲಾಗಿದೆ. ಆದಾಗ್ಯೂ, ಇದು ಪೇಟಿಎಂ ಯುಪಿಐ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬೆಳವಣಿಗೆಯ ನಡುವೆ ಜಿಯೋ ತೆಗೆದುಕೊಂಡಿರುವ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಈ ಬಗ್ಗೆ ಸುದ್ದಿಯಷ್ಟೇ ಕೇಳಿ ಬಂದಿದೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಜಿಐಒದ ಈ ಸೇವೆ ವಾಯ್ಸ್ ಓವರ್ ಸಹಾಯದಿಂದ, ಪ್ರತಿಯೊಂದು ಮಾಹಿತಿಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಮಾರಾಟಗಾರ ಮತ್ತು ಸ್ವೀಕರಿಸುವವರಿಬ್ಬರೂ ಇದರಿಂದ ಸಹಾಯವನ್ನು ಪಡೆಯುತ್ತಾರೆ. ಅಂದರೆ ಎಷ್ಟು ರೂಪಾಯಿ ಪಾವತಿಯಾಗಿದೆ ಎಂದು ಅಂಗಡಿಯವನು ತನ್ನ ಮೊಬೈಲ್ ಅನ್ನು ಪದೇ ಪದೇ ಪರಿಶೀಲಿಸಬೇಕಾಗಿಲ್ಲ. ಇದರಿಂದ ಬಳಕೆದಾರರಿಗೆ ಹಾಗೂ ಅಂಗಡಿಕಾರರಿಗೆ ಸಾಕಷ್ಟು ಸಹಾಯವಾಗಲಿದೆ.