ಕೊಪ್ಪಳ:- ಐತಿಹಾಸಿಕ ವಿಜಯನಗರ ಕಾಲದ ಗತ ವೈಭವ ಸಾರುವ ತಾಲೂಕಿನ ಆನೆಗೊಂದಿ ಉತ್ಸವ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ.
ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಗಾಲಿ ಜನಾರ್ಧನ್ ರೆಡ್ಡಿ, ಐದು ಸರೋವರಗಳಲ್ಲೊಂದಾದ ಪಂಪಾಸರೋವರ ಈ ಆನೆಗೊಂದಿ ಯಲ್ಲಿದೆ. ರಾಮಾಯಣದ ಅನೇಕ ಪ್ರಸಂಗಗಳು ನಡೆದ ಸಾಕ್ಷಿಯಾದ ಪುಣ್ಯಭೂಮಿ ಈ ಆನೆಗೊಂದಿ. 14 ವರ್ಷದ ನಂತ ನಾನು ಬಳ್ಳಾರಿಗೆ ಪಾದ ಇಡ್ತಿನಿ ಅನ್ನೊ ಭಾವನೆ ಇದೆ. ಹನುಮನ ಪಾದ ಹಿಡ್ಕೊ ಅಂತ, ಶ್ರೀರಾಮ ನನ್ನ ಗಂಗಾವತಿಗೆ ಕಳಿಸಿದ್ದಾನೆ ಅನಿಸತ್ತೆ.ಹನುಮನ ಪಾದ ಹಿಡಿದು ಬೇಡ್ಕೊಂಡಿದ್ದಿನಿ ಕರ್ನಾಟಕದ ಎಲ್ಲಾ ಭಾಗದಲ್ಲಿ ಕಾಲಿಡಲು ಆಶಿರ್ವಾದ ಮಾಡು ಎಂದರು.
ಇನ್ನೂ ಇದೇ ವೇಳೆ ಜನಾರ್ಧನ್ ರೆಡ್ಡಿ ಅವರು ಸಿದ್ದರಾಮಯ್ಯರನ್ನ ಹಾಡಿವಹೊಗಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಅಂಜನಾದ್ರಿಗೆ ಯಾವುದೆ ಹಣ ಬಿಡುಗಡೆಯಾಗಿರಲಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಸಿ ಎಂ ಬಳಿ ಹಣ ಕೇಳಿದ್ದೆ ನೂರು ಕೋಟಿ ಅನುದಾನ ನೀಡಿದ್ದಾರೆ. ಪ್ರತಿ ವರ್ಷ ಹಣ ಕೊಡ್ತಿನಿ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಐಪಿಎಲ್ ನಲ್ಲಿ ಕ್ರೀಕೇಟ್ ಪ್ಲೇಯರ್ ಇದ್ದಂಗೆ. ತಂಗಡಗಿ ಅವರು ಪಕ್ಷೇತರ ಎಮ್ ಎಲ್ ಎ ಆಗಿದ್ದಾಗ ನಮ್ಮ ಜೊತೆ ಬಂದಿದ್ರು.ಶಿವರಾಜ ತಂಗಡಗಿ ಅವರು ನನಗೆ ಸಹಕಾರ ಕೊಡ್ತಿರೋದಕ್ಕೆ ನಾನು ಅವರ ಕಡೆ ಒಂದು ಹೆಜ್ಜೆ ಹಾಕಿರಬಹುದು*
ಲೋಕಸಭೆಯಲ್ಲಿ ಬೆಂಬಲ ಕೊಡಬೇಕಾದ್ರೆ ಬಿಜೆಪಿ ಅಂಜನಾದ್ರಿಗೆ ಅನುಧಾನ ನೀಡಲಿ. ಲೊಕಸಭೆ ಚುನಾವಣೆಯ ನೋಟೊಪಿಕೇಶನ್ ಒಳಗೆ 2 ಸಾವಿರ ಅನುಧಾನ ಕೊಡಿ. ಅಂಜನಾದ್ರಿ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಟ್ರೇ ಬಿಜೆಪಿ ಜೊತೆ 2 ಹೆಜ್ಜೆ ಹಾಕ್ತಿನಿ. ಅಂಜನಾದ್ರಿ ಅನುಧಾನ ಕೊಟ್ರೆ ಬಿಜೆಪಿಗೆ ಸಪೋರ್ಟ ಮಾಡ್ತಿನಿ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳಿಕ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಆನೆಗೊಂದಿ ಉತ್ಸವ ಮಾಡ್ತಾಯಿರೋದು ನನಗೆ ಹೆಮ್ಮೆ ಇದೆ. ನಮ್ಮ ಜಿಲ್ಲೆ ಬಹಳ ವಿಶೇಷವಾಗಿದೆ, ಜಿಲ್ಲೆಯಲ್ಲಿ ಹಲವು ಐತಿಹಾಸಿಕ ವಿಶೇಷತೆಗಳಿವೆ. ನಮ್ಮ ಜಿಲ್ಲೆಯ ವಿಶೇಷತೆಗಳ ಪರಿಚಯ ಮಾಡುವ ಕೆಲಸ ಮಾಡ್ತಾಯಿದ್ದೆವೆ. ಆನೆಗೊಂದಿ ಅಂಜನಾದ್ರಿ ಭಾಗದ ಅಭಿವೃದ್ಧಿಗೆ ಸಂಪೂರ್ಣ ಕೆಲಸ ಮಾಡ್ತಿನಿ. ಈ ಭಾಗದಲ್ಲಿ ಹೆಚ್ಚಿನ ಭತ್ತ ಬೆಳೆಯಲಾಗತ್ತೆ, ಅದಕ್ಕಾಗಿ ರೈಸ್ ಟೆಕ್ನಾಲಜೀ ಪಾರ್ಕ್ ಮಾಡಲಾಗಿದೆ, ಆನೆಗೊಂದಿಯಲ್ಲಿ ಕೇವಲ ಉತ್ಸವ ಮಾಡ್ತಾಯಿಲ್ಲ, ಆನೆಗೊಂದಿಯ ಇತಿಹಾಸದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗ್ತಿದೆ. ನಮಗೆ ಯಾವುದೆ ತಾರತಮ್ಯ ಮಾಡಲು ಬರಲ್ಲ, ಕನಕಗಿರಿ ಉತ್ಸವ ಮಾಡಿದಂತೆಯೆ ಆನೆಗೊಂದಿ ಉತ್ಸವ ಮಾಡ್ತಾಯಿದ್ದಿವಿ. ಸಿ ಎಂ ಹಾಗೂ ಡಿಸಿಎಂ ಬರಬೇಕಾಗಿತ್ತು, ಆದ್ರೆ ಬರೋಕೆ ಆಗಿಲ್ಲ. ಸಿ ಎಂ ಡಿಸಿಎಂ ಬಂದ್ರು, ಬರದೇಯಿದ್ರು ಒಂದೋಂದು ರೂಪ ಕೊಡ್ತಾರೆ. ಜನಾರ್ದನ ರೆಡ್ಡಿಯವರು ನಮಗಿಂತ ಹಿರಿಯರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಕಾರಣ.
ಹಿಂದೆ ಬಿಜೆಪಿ ಅಧಿಕಾರಕ್ಕೆ ತರಲು ನಮ್ಮನ್ನೆಲ್ಲ ಕರೆದುಕೊಂಡು ಹೋದವರು. ರಾಜಕಾರಣ ಯಾವ ರೀತಿ ಮಾಡಬೇಕು ಎಂಬುದು ರೆಡ್ಡಿಯವರಿಗೆ ಗೊತ್ತು. ರಾಜ್ಯ ಸಭೆಯಲ್ಲಿ ರೆಡ್ಡಿ ಯಾರಿಗೆ ಓಟ್ ಹಾಕಿದ್ದಾರೆ ಗೊತ್ತಿಲ್ಲ. ನಾನು ಅವರಲ್ಲಿ ಓಟ್ ಕೇಳಲು ಹೋಗಿದ್ದು ಸತ್ಯ, ಒಳ್ಳೆಯರವರಿಗೆ ಓಟ್ ಹಾಕಿ ಅಂತ ಕೇಳಿದ್ದಿನಿ. ನಾವೆಲ್ಲರೂ ಒಂದೆ ಇದ್ದವೇ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಒಂದಾಗಿದ್ದೆವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಗೆ ಪ್ರತಿ ವರ್ಷ ನೂರು ಕೋಟಿ ಅನುದಾನ ಕೊಡ್ತಿವಿ. ಇಲ್ಲಿ ಬೇಕಾದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನ ಮಾಡ್ತಿವಿ. ಇಡಿ ದೇಶದ ಜನರು ಅಂಜನಾದ್ರಿ ಆನೆಗೊಂದಿ ಭಾಗದ ಕಡೆ ನೋಡಬೇಕು.ಆ ನಿಟ್ಟಿನಲ್ಲಿ ಕೆಲಸ ಮಾಡ್ತಿವಿ ಎಂದರು.