ಕನ್ನಡದ ಹಾಸ್ಯ ನಟ ಕೋಮಲ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಖ್ಯಾತ ನಟನ ಜೊತೆ ಕೋಮಲ್ ತೆರೆಹಂಚಿಕೊಳ್ಳುತ್ತಿದ್ದು ಈ ಬಗ್ಗೆ ಕೋಮಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಕೋಮಲ್ ಇದೀಗ ನಾಯಕನಾಗಿ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ಕಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಚಿತ್ರವೊಂದರಲ್ಲಿ ತಮಿಳು ಲೆಜೆಂಡರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ನಟ ಪ್ರಭು ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಭು ಜೊತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಕೋಮಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೊದಲ ತಮಿಳು ಸಿನಿಮಾ ಎಂದು ಕೋಮಲ್ ಹೇಳಿದ್ದಾರೆ.
ತಮಿಳು ಸಿನಿಮಾ ಜೊತೆ ಕನ್ನಡದ ‘ಕುಟೀರ’ ಸಿನಿಮಾದಲ್ಲಿ ಕೋಮಲ್ ಬ್ಯುಸಿಯಾಗಿದ್ದಾರೆ. ಕೋಮಲ್ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಗಿಚ್ಚಿ ಗಿಲಿ ಗಿಲಿ’ 3 ಶೋಗೆ ಕೋಮಲ್ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ಕೆಲ ಸಮಯ ಸಿನಿಮಾ ರಂಗದಿಂದ ದೂರವಿದ್ದ ಕೋಮಲ್ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.