ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ರಾಜಧಾನಿ ಬೆಂಗಳೂರಿನ 200ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಟೈಲರಿಂಗ್ ಮಿಷನ್ ನ್ನ ನೀಡಲಾಗಿದೆ. ನಗರದ ಲಗ್ಗೆರೆಯ MEI ಕಾಲೋನಿ ಬಳಿಯ ಬಿಬಿಎಂಪಿ ಗ್ರೌಂಡ್ ನಲ್ಲಿ ಆಯೋಜನೆ ಮಾಡಲಾಗಿತ್ತು.
ಸ್ವಂತ ದುಡಿಮೆಯಿಂದ ಮಹಿಳೆಯರು ಜೀವನ ನಡೆಸಲಿ ಎಂಬ ಉದ್ದೇಶದಿಂದ ಮೂರು ತಿಂಗಳುಗಳ ಕಾಲ ತರಬೇತಿಯನ್ನ ವರ್ಚಸ್ ನ್ಯಾಷನಲ್ ಸೇವಾ ಟ್ರಸ್ಟ್ ಮತ್ತು ಎಸ್ ಜೆ ಎಸ್ ಎಂಟರ್ಪ್ರೈಸ್ ಕಂಪನಿಯಿಂದ ನೀಡಲಾಗಿತ್ತು. ಅಲ್ಲದೇ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೂಡ ಇದ್ರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಹಿಳೆಯರ ಸಬಲೀಕರಣದ ಯಶಸ್ಸಿಗೆ ಕಾರಣವಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರ, ಹೈ ಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಆಗಮಿಸಿದರೆ, ವರ್ಚಸ್ ನ್ಯಾಷನಕ್ ಸೇವಾ ಟ್ರಸ್ಟ್ ಮುಖ್ಯಸ್ಥೆ ವೈಶಾಲಿಯವರು ನೇತೃತ್ವವನ್ನ ವಹಿಸಿಕೊಂಡಿದ್ದರು. ಇನ್ನಿ ಎಸ್ ಜೆ ಎಸ್ ನ ಸಿಓಓ ಸದಾಶಿವ ಬಳಿಗಾರ್ ಸೇರಿ ಇನ್ನಿತರ ಮುಖಂಡರು ಆಗಮಿಸುವ ಮೂಲಕ ನೆರೆದಿದ್ದ ಮಹಿಳಾ ಸಾಧಕಿಯರನ್ನ ಗೌರವ ಪೂರ್ವಕವಾಗಿ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.