ಬೆಂಗಳೂರು:- ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಬಾಂಬರ್ ಪತ್ತೆಗೆ ಎನ್ಐಎ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಬಾಂಬರ್ ಬಳ್ಳಾರಿ ಕಡೆ ಹೋಗಿರುವ ಬಗ್ಗೆ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಆತನ ಪತ್ತೆಗೆ ಬಲೆಬೀಸಿದ್ದಾರೆ.
ಈ ನಡುವೆ ಬಳ್ಳಾರಿಯಲ್ಲಿ ಬಾಂಬರ್ ಓಡಾಡಿರುವ ನಾಲ್ಕು ಹೊಸ ಸಿಸಿಟಿವಿ ಪೋಟೊಗಳನ್ನ ಎನ್ಐಎ ಅಧಿಕಾರಿಗಳು ರಿಲೀಸ್ ಮಾಡಿದ್ದು ಶಂಕಿತನ ಮಾಹಿತಿ ಸಿಕ್ಕಲ್ಲಿ ಎನ್ಐಎಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದೆ ಬಳ್ಳಾರಿ ಮಾಡ್ಯುಲ್ ವಾಸನೆ ಕಂಡು ಬಂದ ಹಿನ್ನೆಲೆಯಲ್ಲಿ ನಾಲ್ವರನ್ನ ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಬಂಧಿತರಾದ ಸುಲೇಮಾನ್, ಸಮೀರ್ ಶನಾಯ್ ರೆಹಮಾನ್ ನನ್ನ ಎನ್ಐಎ ತಂಡ ತೀವ್ರ ವಿಚಾರಣೆ ನಡೆಸಿದೆ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿ 10 ದಿನ ಆಯ್ತು, ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಹೋಮ, ಪೂಜೆ ಪುನಸ್ಕಾರಗಳು ನಡೆಸಿ ಗ್ರಾಹಕರಿಗೆ ಸೇವೆ ಶುರುವಾಗಿದೆ.
ಗ್ರಾಹಕರಿಗೆ ಸೇವೆ ಆರಂಭ ಹಿನ್ನೆಲೆ ಕೆಫೆಯಲ್ಲಿ ಭದ್ರತೆಯನ್ನೂ ಒದಗಿಸಲಾಗಿತ್ತು. ಬರೋ ಎಲ್ಲ ಗ್ರಾಹಕರನ್ನೂ, ಅವರ ಬ್ಯಾಗ್ಗಳನ್ನೂ ಚೆಕ್ ಮಾಡಿ ಒಳಗೆ ಬಿಡಲಾಗ್ತಿತ್ತು. ಮೆಟಲ್ ಡಿಟೆಕ್ಟರ್ ಅನ್ನೂ ಅಳವಡಿಸಲಾಗಿತ್ತು. ಈ ಬಗ್ಗೆ ಮಾತಾಡಿದ ರಾಮೇಶ್ವರಂ ಕೆಫೆಮಾಲೀಕ ರಾಘವೇಂದ್ರರಾವ್, ಜನರ ಈ ಪ್ರೀತಿಗೆ ಖುಷಿಯಾದರೂ, ಅಲ್ಲದೇ ಕೆಫೆಯಲ್ಲಿ ಕೈಗೊಂಡಿರೋ ಭದ್ರತೆ ಏರ್ಪಡಿಸಲಾಗಿದೆ ಅಂತ ಮಾಹಿತಿ ಹಂಚಿಕೊಂಡಿದ್ದಾರೆ.
ರಾಮೇಶ್ವರಂ ಕೆಫೆಗೆ ಮೊದಲ ದಿನದಿಂದಲೇ ಜನಜಂಗುಳಿ ಕಂಡುಬಂತು. ಕೆಫೆ ಪುನರ್ ಆರಂಭವಾಗಿದ್ದಕ್ಕೆ ಗ್ರಾಹಕರು ಕೂಡ ಸಂತಸ ವ್ಯಕ್ತಪಡಿಸಿದರು.