ದೆಹಲಿ: ನಾಯಕಿ ಹರ್ಮನ್ ಪ್ರೀತ್ಕೌರ್ ಅವರ ಬೆಂಕಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು (Mumbai Indians Women) ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ (Gujarat Giants Women) ನೀಡಿದ 191ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 19.5 ಓವರ್ಗಳಲ್ಲಿ ನಿಗದಿ ಗುರಿ ತಲುಪಿ ಯಶಸ್ಸುಕಂಡಿತು ಕೊನೆಯ 2 ಓವರ್ಗಳಲ್ಲಿ ಮುಂಬೈ ಗೆಲುವಿಗೆ 23 ರನ್ಗಳ ಅಗತ್ಯವಿತ್ತು, ಆದ್ರೆ ಹರ್ಮನ್ಪ್ರೀತ್ ಕೌರ್ (Harmanpreet Kaur) ಅವರ ಸಿಕ್ಸರ್, ಬೌಂಡರಿ ನೆರವಿನಿಂದ 11 ಎಸೆತಗಳಲ್ಲೇ ಗುರಿ ತಲುಪುವಂತಾಯಿತು. 19ನೇ ಓವರ್ನಲ್ಲೇ 10 ರನ್ ಗಳಿಸಿದ ಮುಂಬೈ, ಕೊನೇ ಓವರ್ನ 5 ಎಸೆತಗಳಲ್ಲೇ 13 ರನ್ ಬಾರಿಸಿತು. ಒಟ್ಟಾರೆ ಕೊನೇ 30 ಎಸೆತಗಳಲ್ಲಿ ಮುಂಬೈ ಬರೋಬ್ಬರಿ 72 ರನ್ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.
ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಯಶ್ವಂತ ಗುರೂಜಿ: ಮಹಿಳಾ ಪ್ರಧಾನಿಯಾಗಿ ದೇಶದ ಚುಕ್ಕಾಣಿ
ಶನಿವಾರ ನಡೆದ ಮಹಿಳಾ ಕ್ರಿಕೆಟ್ ಅಭಿಮಾನಿಗಳ (Womens Cricket Fans) ಕಣ್ಣಿಗೆ ಹಬ್ಬವಾಗಿತ್ತು. ಇತ್ತಂಡದ ಆಟಗಾರರೂ ಸಿಕ್ಸರ್ – ಬೌಂಡರಿ ಮಳೆ ಸುರಿಸಿದರು. ಈ ಆಟದಲ್ಲಿ ಬರೋಬ್ಬರಿ 44 ಬೌಂಡರಿ, 13 ಸಿಕ್ಸರ್ಗಳು ದಾಖಲಾದವು. ಈ ಪೈಕಿ ಮುಂಬೈ ಪರ 22 ಬೌಂಡರಿ, 7 ಸಿಕ್ಸರ್ ಸಿಡಿದರೆ, ಗುಜರಾತ್ ಪರ 22 ಬೌಂಡರಿ, 6 ಸಿಕ್ಸರ್ಗಳು ದಾಖಲಾಯಿತು.
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಮುಂಬೈ ಪರ ಯಾಸ್ತಿಕಾ ಭಾಟಿಯಾ 49 ರನ್, ಹೇಲಿ ಮ್ಯಾಥೀವ್ಸ್ 18 ರನ್, ನಟಾಲಿ ಸ್ಕಿವರ್ ಬ್ರಂಟ್ 2 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಆದ್ರೆ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ ಹರ್ಮನ್ ಪ್ರೀತ್ಕೌರ್ 48 ಎಸೆತಗಳಲ್ಲಿ ಅಜೇಯ 95 ರನ್ (10 ಬೌಂಡರಿ, 5 ಸಿಕ್ಸರ್) ಸಿಡಿಸುವ ಮೂಲಕ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟರು. ಅಮೇಲಿಯಾ ಕೇರ್ 12 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು.