ಮಂಡ್ಯ: ರಾಜಕೀಯ ವೈಷಮ್ಯಕ್ಕೆ ಕಿಡಿಗೇಡಿಗಳಿಂದ ಕಾರಿಗೆ ಹಚ್ಚಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಟೆನ್ಷನ್ : ಪ್ರತಾಪ್ ಸಿಂಹ ಬದಲು ರಾಜಮನೆತನಕ್ಕೆ ಮೈಸೂರು ಫಿಕ್ಸಾ..!
ಗ್ರಾಮದ ಜೆಡಿಎಸ್ ಯುವ ಮುಖಂಡ ಪ್ರೀತಮ್ ಎಂಬುವರಿಗೆ ಸೇರಿದ ಕಾರಾಗಿದ್ದು ಮನೆಯ ಮುಂದಿನ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಮುಂಜಾನೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಕ್ಷಣಾರ್ಧದಲ್ಲಿ ಬೆಂಕಿಗೆ ಹೊತ್ತಿ ಉರಿದು ಕಾರು ಭಸ್ಮ.
ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಕಾರು ಮಾಲೀಕನ ಆಕ್ರೋಶಗೊಂಡಿದ್ದು ರಾಜಕೀಯ ವೈಷಮ್ಯದ ದುರುದ್ದೇಶದಿಂದ ಬೆಂಕಿ ಹಚ್ಚಿರುವ ಆರೋಪ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.