ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು, ನಿವೃತ್ತಿಯ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ ರೋಹಿತ್ ತಂಡ, 4-1 ಅಂತರದಲ್ಲಿ ಸರಣಿ ಗೆಲ್ಲುವಂತೆ ಮಾಡಿದರು. ಆದರೆ ಧರ್ಮಶಾಲಾದಲ್ಲಿ ಸರಣಿ ಗೆದ್ದು ಐದನೇ ಟೆಸ್ಟ್ನಲ್ಲಿ ಗೆಲುವು ದಾಖಲಿಸಿದ ನಂತರ ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಪ್ರಶ್ನೆಗೆ ಮೌನ ಮುರಿದಿದ್ದಾರೆ. ಪಂದ್ಯದ ನಂತರ ಜಿಯೋ ಸಿನಿಮಾದಲ್ಲಿ ರೋಹಿತ್ ಶರ್ಮಾ ನಿವೃತ್ತಿ ಕುರಿತು ಹೇಳಿಕೆ ನೀಡಿದ್ದು ತಾನು ಯಾವಾಗ ನಿವೃತ್ತಿಯಾಗುತ್ತೇನೆ ಎಂಬುದನ್ನೂ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರು ತಮ್ಮ ನಿವೃತ್ತಿಯ ಯೋಜನೆಯಲ್ಲಿ, ‘ ನನಗೆ ಇನ್ನು ಮುಂದೆ ಆಡಲು ಸಾಧ್ಯವಿಲ್ಲ ಎಂಬುದು ನನ್ನ ಅರಿವಿಗೆ ಬರುತ್ತದೋ, ಆ ದಿನ ನಾನು ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತೇನೆ. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಾನು ನನ್ನ ಆಟವನ್ನು ಸುಧಾರಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ನಾನು ಕ್ರಿಕೆಟ್ನಿಂದ ದೂರ ಸರಿಯುವುದಿಲ್ಲ ಎಂಬುದನ್ನು ರೋಹಿತ್ ಖಚಿತಪಡಿಸಿದ್ದಾರೆ.