ಲೋಕಸಭೆ ಚುನಾವಣೆಗೆ (Elections) ಎಲ್ಲ ಪಕ್ಷಗಳು ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ದಕ್ಷಿಣದಲ್ಲಿ ಹೆಚ್ಚೆಚ್ಚು ಮತಗಳನ್ನು ಪಡೆಯಲು ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದಂತಹ ತಂತ್ರಗಳನ್ನು ಹೆಣೆಯುತ್ತಿವೆ. ಆದರೆ, ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ತಾವು ಡಿಎಂಕೆ ಜೊತೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ (Kamal Haasan) ತಿಳಿಸಿದ್ದಾರೆ.
Bigg News: ಮಹಿಳೆಯರ ಸುರಕ್ಷತೆಗಾಗಿ ಮಹತ್ವದ ನಿರ್ಧಾರ: ರಾಜ್ಯದಲ್ಲಿ ಇವಿ ಬೈಕ್ ಟ್ಯಾಕ್ಸಿ ಸೇವೆ ಬ್ಯಾನ್…!
ಮುಂಬರುವ ಲೋಕಸಭೆ (Lok Sabha) ಚುನಾವಣೆಯಲ್ಲಿ ಕಮಲ್ ಹಾಸನ್ ಮತ್ತು ಕಮಲ್ ಪಕ್ಷ ಮಕ್ಕಳ್ ನಿಧಿ ಮೈಯಂ (ಎಂಎನ್ಎಂ) ಸ್ಪರ್ಧೆ ಮಾಡದೇ ಇದ್ದರೂ, ದ್ರಾವಿಡ ಮುನ್ನೇತ್ರ ಕಳಗ ಪಕ್ಷ (ಡಿಎಂಕೆ)ಕ್ಕೆ ತಮ್ಮ ಬೆಂಬಲ ನೀಡುವುದಾಗಿ ಕಮಲ್ ಹಾಸನ್ ತಿಳಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ಈ ನಿರ್ಧಾರ ಎಂದೂ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಮಲ್, ನಾನು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ. ಜೊತೆಗೆ ನನ್ನ ಪಕ್ಷವು ಕೂಡ ಚುನಾವಣೆಯನ್ನು ಎದುರಿಸುವುದಿಲ್ಲ. ಆದರೆ, ಮೈತ್ರಿಗೆ ಸಹಾಯ ನೀಡುವುದರ ಮೂಲಕ ಡಿಎಂಕೆ ಪಕ್ಷವನ್ನು ಗೆಲ್ಲಿಸುವುದರತ್ತ ಹೆಜ್ಜೆ ಹಾಕುತ್ತೇವೆ ಎಂದಿದ್ದಾರೆ.