ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಶತಮಾನದ ದಾಖಲೆ ಬರೆದಿದ್ದಾರೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 15 ಓವರ್ ಬೌಲಿಂಗ್ ಮಾಡಿದ್ದ ಕುಲ್ದೀಪ್ 72 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ಈ ಐದು ವಿಕೆಟ್ಗಳೊಂದಿಗೆ ಕುಲ್ದೀಪ್ ಯಾದವ್ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ಗಳನ್ನು ಪೂರೈಸಿದ್ದಾರೆ. ಅದು ಕೂಡ ಅತೀ ಕಡಿಮೆ ಎಸೆತಗಳ ಮೂಲಕ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 50 ವಿಕೆಟ್ಗಳನ್ನು ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಯಾದವ್ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಅಕ್ಷರ್ ಪಟೇಲ್ ಹೆಸರಿನಲ್ಲಿತ್ತು. ಎಡಗೈ ಸ್ಪಿನ್ನರ್ ಅಕ್ಷರ್ 2205 ಎಸೆತಗಳ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಕಬಳಿಸಿ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಕುಲ್ದೀಪ್ ಯಾದವ್ ಅಳಿಸಿ ಹಾಕಿದ್ದಾರೆ.
ಕೇವಲ 1871 ಎಸೆತಗಳ ಮೂಲಕ 50 ವಿಕೆಟ್ ಕಬಳಿಸಿರುವ ಕುಲ್ದೀಪ್ ಯಾದವ್ ಇದೀಗ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕೇವಲ ಇಬ್ಬರು ಸ್ಪಿನ್ನರ್ ಮಾತ್ರ ಕಡಿಮೆ ಎಸೆತಗಳಲ್ಲಿ 50 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಜಾನಿ ಬ್ರಿಗ್ಸ್. 1879-90 ರ ನಡುವೆ ಇಂಗ್ಲೆಂಡ್ ಪರ ಆಡಿದ್ದ ಬ್ರಿಗ್ಸ್ 1512 ಎಸೆತಗಳಲ್ಲಿ 50 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ 1871 ಎಸೆತಗಳ ಮೂಲಕ ಕುಲ್ದೀಪ್ ಯಾದವ್ 50 ವಿಕೆಟ್ಗಳ ಸಾಧನೆ ಮಾಡಿದ್ದಾರೆ