ಪಾಕ್ ಬ್ಯಾಟರ್ ಬಾಬರ್ ಅಝಂ ಅವರು ಅರ್ಧಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಸೆಲೆಬ್ರೇಷನ್ ಕಾಪಿ ಮಾಡಿದ್ದಾರೆ. ಸ್ಟಾರ್ ಪಾಕಿಸ್ತಾನಿ ಬ್ಯಾಟರ್ ಮತ್ತು ಮಾಜಿ ನಾಯಕ ಬಾಬರ್ ಅಝಂ ಅದ್ಭುತ ಫಾರ್ಮ್ನಲ್ಲಿದ್ದಾರೆ.
ಪಿಎಸ್ಎಲ್ನ ಇತಿಹಾಸದಲ್ಲಿ ಪ್ರಮುಖ ರನ್ ಸ್ಕೋರರ್ ಆಗಿರುವ ಬಾಬರ್, ಶುಕ್ರವಾರ (ಮಾರ್ಚ್ 8) ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ
ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ತಮ್ಮ ತಂಡದ ಪೇಶಾವರ್ ಝಲ್ಮಿ ಪಂದ್ಯದ ಸಂದರ್ಭದಲ್ಲಿ ಪಿಎಸ್ಎಲ್ 2024 ರ ನಾಲ್ಕನೇ ಅರ್ಧಶತಕವನ್ನು ಗಳಿಸಿದರು.
ಬಾಬರ್ ಅಝಂ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 30 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಪಂದ್ಯದಲ್ಲಿ ಬಾಬರ್ ಅವರು ಅರ್ಧಶತಕ ಸಿಡಿಸಿದ ಸಂದರ್ಭ ವಿರಾಟ್ ಕೊಹ್ಲಿಯ ಸಂಭ್ರಮಾಚರಣೆಯನ್ನು ನಕಲು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಲವಾರು ವಿಡಿಯೋಗಳಲ್ಲಿ, ವಿರಾಟ್ ಕೊಹ್ಲಿ ಶತಕ ಅಥವಾ ಅರ್ಧಶತಕ ಬಾರಿಸಿದ ಸಂದರ್ಭ ಸಂಭ್ರಮಾಚರಣೆ ಮಾಡುವಂತೆ ಬಾಬರ್ ಕೂಡ ತನ್ನ ಕುತ್ತಿಗೆಯಿಂದ ಪೆಂಡೆಂಟ್ ತೆಗೆದು ಅದನ್ನು ಚುಂಬಿಸಿದ್ದಾರೆ.