ಒಣ ಬೀಜಗಳಲ್ಲಿ ಶಕ್ತಿಯುತವಾದ ಪೌಷ್ಟಿಕ ಸತ್ವಗಳು ಸಾಕಷ್ಟು ಕಂಡುಬರುತ್ತವೆ. ಪ್ರತಿಯೊಬ್ಬರೂ ಸಹ ಇವುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ಸಹ ಇವುಗಳ ಸೇವನೆಯಿಂದ ಆರೋಗ್ಯಕರವಾದ ಹಾಗೂ ಸಕಾರಾತ್ಮಕ ಲಾಭಗಳನ್ನು ಪಡೆದುಕೊಳ್ಳಬಹುದು. ಅಧ್ಯಯನಗಳು ಹೇಳುವಂತೆ ಇವುಗಳ ಸೇವನೆಯಿಂದ ಕ್ರಮೇಣವಾಗಿ ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ.
ಆರೋಗ್ಯಕರವಾದ ಕೊಬ್ಬಿನ ಅಂಶಗಳು ನಿಮ್ಮ ದೇಹಕ್ಕೆ ಸೇರುವುದರ ಜೊತೆಗೆ ನಿಮ್ಮ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡಿ ಜಾಸ್ತಿ ಹೊತ್ತು ನಿಮಗೆ ಹೊಟ್ಟೆ ಹಸಿಯದಂತೆ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತವೆ. ಇದರಿಂದ ಕ್ರಮೇಣವಾಗಿ ನಿಮ್ಮ ದೇಹದ ತೂಕ ಕೂಡ ನಿಯಂತ್ರಣವಾಗುತ್ತದೆ ಜೊತೆಗೆ ಹೃದಯರಕ್ತನಾಳದ ಕಾಯಿಲೆಗಳು ದೂರವಾಗುತ್ತವೆ. ಯಾವುದೇ ತರಹದ ಹೃದಯಘಾತ, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳು ಇರುವುದಿಲ್ಲ.
ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದರ ಜೊತೆಗೆ ನಿಮ್ಮ ರಕ್ತದ ಒತ್ತಡವನ್ನು ಸಹ ನಿಯಂತ್ರಣ ಮಾಡಿ ನಿಮ್ಮ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ. ಉರಿಯೂತವನ್ನು ದೂರ ಮಾಡುವುದರ ಜೊತೆಗೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಸಹ ಆಗಿವೆ. ನೀವು ಕೇವಲ ವಾಲ್ನಟ್ ಸೇವನೆಗೆ ಮಾತ್ರ ಅಂಟಿಕೊಳ್ಳುವ ಅವಶ್ಯಕತೆ ಇಲ್ಲ. ಇದರ ಜೊತೆಗೆ ಇನ್ನಿತರ ಒಣ ಬೀಜಗಳು ಸಹ ನಿಮ್ಮ ಮಧುಮೇಹ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.
ಗೋಡಂಬಿ
• ಸಾಕಷ್ಟು ಜನರು ಗೋಡಂಬಿ ಸೇವನೆ ಮಾಡುವುದು ಸೊಂಟದ ಭಾಗದಲ್ಲಿ ಕೊಬ್ಬಿನ ಅಂಶ ಹೆಚ್ಚುವಂತೆ ಮಾಡುತ್ತದೆ ಎಂದು ತಿಳಿದುಕೊಂಡಿದ್ದಾರೆ.
• ಆದರೆ ಗೋಡಂಬಿ ಬೀಜಗಳ ನಿಯಮಿತ ಸೇವನೆಯಿಂದ ನಿಮ್ಮ ರಕ್ತದ ಒತ್ತಡ ನಿಯಂತ್ರಣವಾಗು ವುದರ ಜೊತೆಗೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶಗಳು ಸಹ ಕಡಿಮೆಯಾಗುತ್ತವೆ. ಒಂದು ದಿನಕ್ಕೆ ನೀವು ಹತ್ತರಿಂದ ಹದಿನೈದು ಗೋಡಂಬಿ ಬೀಜಗಳನ್ನು ತಿನ್ನಬಹುದು.
ಬಾದಾಮಿ ಬೀಜಗಳು
ಬಾದಾಮಿ ಬೀಜಗಳಲ್ಲಿ ಒಮೆಗ 3 ಫ್ಯಾಟಿ ಆಸಿಡ್ ಅಂಶಗಳು ಸಾಕಷ್ಟಿವೆ. ನಾರಿನ ಅಂಶ, ಪ್ರೊಟೀನ್ ಅಂಶ, ಇತ್ಯಾದಿಗಳು ಹೆಚ್ಚಾಗಿದ್ದು ನಿನ್ನ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇವುಗಳ ಸೇವನೆಯಿಂದ ಕಡಿಮೆ ಯಾಗುತ್ತದೆ ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸುತ್ತದೆ. ಬಹಳ ಪ್ರಮುಖವಾಗಿ ಮಧುಮೇಹ ಸಮಸ್ಯೆ ಇರುವವರಿಗೆ ಇವುಗಳಿಂದ ಪ್ರಯೋಜನ ಜಾಸ್ತಿ.
ಪಿಸ್ತಾ ಬೀಜಗಳು
ಪಿಸ್ತಾ ಬೀಜಗಳು ನಿಮ್ಮ ಬಾಡಿ ಮಾಸ್ ಇಂಡೆಕ್ಸ್ ಕಡಿಮೆ ಮಾಡುವ ಜೊತೆಗೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ಮಾಡಿ ನಿಮ್ಮ ಹೊಟ್ಟೆ ಹಸಿವನ್ನು ಸಹ ಕಡಿಮೆ ಮಾಡುತ್ತವೆ. ಪಿಸ್ತಾ ಬೀಜಗಳನ್ನು ತಿನ್ನುವು ದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವುದಿಲ್ಲ ಬದಲಿಗೆ ನಿಮ್ಮ ಮಧುಮೇಹ ಸಮಸ್ಯೆ ಅತ್ಯುತ್ತಮವಾಗಿ ನಿಯಂತ್ರಣ ಆಗುವುದರ ಜೊತೆಗೆ ನಿರ್ವಹಣೆಯಾಗುತ್ತದೆ.
ಕಡಲೆ ಬೀಜಗಳು
• ಕಡಲೆ ಬೀಜಗಳನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಏಕೆಂದರೆ ಕಡಲೇ ಬೀಜಗಳು ಬೆಲೆಯಲ್ಲಿ ಕಡಿಮೆ ಮತ್ತು ಸಿಗುವ ಆರೋಗ್ಯ ಪ್ರಯೋಜನಗಳಲ್ಲಿ ಅಪಾರ. ನಾರಿನಂಶ ಮತ್ತು ಪ್ರೊಟೀನ್ ಅಂಶ ಹೆಚ್ಚಾಗಿರುವ ಜೊತೆಗೆ ಕಡಲೆ ಬೀಜಗಳಲ್ಲಿ ಸಹ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇರುತ್ತದೆ.
• ಹೀಗಾಗಿ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಬಹಳ ಬೇಗನೆ ನಿಯಂತ್ರಣ ಮಾಡಿಕೊಳ್ಳಬೇಕು ಎನ್ನುವವರು ಪ್ರತಿದಿನ ಒಂದು ಹಿಡಿ ಕಡಲೆ ಬೀಜಗಳನ್ನು ತಿನ್ನಬಹುದು. ಕಡಲೆ ಬೀಜಗಳನ್ನು ನೆನೆಸಿ ತಿಂದರೆ ಇನ್ನೂ ಒಳ್ಳೆಯದು.