ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿತ್ತು. ಇದಕ್ಕೆ ಕಾರಣ ಆಗಿದ್ದು ನಯನತಾರಾ ಇನ್ಸ್ಟಾಗ್ರಾಮ್ನಲ್ಲಿ ವಿಘ್ನೇಶ್ ಶಿವನ್ ಅವರನ್ನು ಅನ್ಫಾಲೋ ಮಾಡಿದ್ದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಹುಟ್ಟಿತ್ತು. ಕೆಲವು ಮಾಧ್ಯಮಗಳು ವಿಚ್ಛೇದನದ ಬಗ್ಗೆ ಸುದ್ದಿ ಮಾಡಿದ್ದವು. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಸೆಲೆಬ್ರಿಟಿಗಳು ಏನೆ ಮಾಡಿದರು ಸುದ್ದಿಯಾಗುತ್ತಾರೆ. ಅವರ ಸಣ್ಣ ಪುಟ್ಟ ವಿಚಾರಗಳು ಜನ ಸಾಮಾನ್ಯರು ಗಮನಿಸುತ್ತಿರುತ್ತಾರೆ. ಇತ್ತೀಚೆಗೆ ನಯನತಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಘ್ನೇಶ್ ಅವರನ್ನು ಅನ್ಪಾಲೋ ಮಾಡಿದ್ದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ ಚರ್ಚೆ ಆಗಿದ್ದು, ಕೆಲವೇ ಸಮಯದಲ್ಲಿ ನಯನತಾರಾ ಮತ್ತೆ ಫಾಲೋ ಮಾಡೋಕೆ ಆರಂಭಿಸಿದ್ದರು.
ಕೊಳಲು ವಾದಕ ನವೀನ್ ಅವರು ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅವರು ಕೊಳಲು ನುಡಿಸುತ್ತಿರುವಾಗ ನಯನತಾರಾ ಹಾಗೂ ವಿಘ್ನೇಶ್ ಅವರು ಪ್ರೀತಿಯಿಂದ ಇದನ್ನು ಕೇಳಿದ್ದಾರೆ. ಈ ಘಟನೆ ನಡೆದಿದ್ದು 2023ರ ಜೂನ್ ತಿಂಗಳಲ್ಲಿ. ಈ ವಿಡಿಯೋನ ನವೀನ್ ಈಗ ಹಂಚಿಕೊಂಡಿದ್ದಾರೆ. ಇದನ್ನು ನಯನತಾರಾ ಅವರು ಸ್ಟೇಟಸ್ಗೆ ಹಂಚಿಕೊಂಡು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಈ ಮೂಲಕ ಎಲ್ಲವೂ ಸರಿ ಇದೆ ಎಂಬದನ್ನು ಸ್ಪಷ್ಟಪಡಿಸಿದ್ದಾರೆ.