ಇತ್ತೀಚೆಗೆ ಅವಿವಾ ಬಿದ್ದಪ್ಪ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುದ್ದಿನ ಮಡದಿಗೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ವಿಶೇಷವಾಗಿ ಶುಭ ಹಾರೈಸಿದ್ದಾರೆ.
ಪತ್ನಿ ಅವಿವಾ ಮುತ್ತು ಕೊಡ್ತಿರುವ ಫೋಟೋವನ್ನು ಶೇರ್ ಮಾಡಿರುವ ಅಭಿಷೇಕ್, ಜೀವನವು ನೀವು ಬಯಸುವ ಎಲ್ಲವನ್ನೂ ನೀಡಲಿ, ಸಂತೋಷ, ಶಾಂತಿ, ಪ್ರೀತಿ ನಿಮ್ಮದಾಗಲಿ ಮತ್ತು ನೀವು ನನ್ನವರು ಎಂದು ಬರೆದುಕೊಂಡಿದ್ದಾರೆ.
ಹ್ಯಾಪಿ ಬರ್ತ್ ಡೇ ವೈಫಿ ಎಂದು ಅಭಿಷೇಕ್ ಅಂಬರೀಶ್ ಪತ್ನಿಯನ್ನು ಟ್ಯಾಗ್ ಮಾಡಿದ್ದಾರೆ. ಪತಿಯ ಪ್ರೀತಿಯ ಶುಭ ಹಾರೈಕೆಗೆ ಅವಿವಾ ಲವ್ ಯೂ ಮೈ ವಲ್ಡ್ ಎಂದು ಕಾಮೆಂಟ್ ಮಾಡಿದ್ದಾರೆ.
ಅಂಬಿಷೇಕ್ ಅಂಬರೀಶ್ ಪತ್ನಿ, ಸಂಸದೆ ಕಂ ನಟಿ ಸುಮಲತಾ ಅವರ ಸೊಸೆಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಷನ್ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿಅದ್ಧೂರಿಯಾಗಿ ನಡೆದಿದೆ.
ಅಭಿಷೇಕ್ ಹಾಗೂ ಅವಿವಾ ಪ್ರೀತಿಸಿ ಮದುವೆ ಆಗಿದ್ದಾರೆ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಜೋಡಿ ಕಳೆದ ವರ್ಷ ಸಾಕಷ್ಟು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವರ್ಷ ಅಂಬಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಆಗಿತ್ತು. ಸದ್ಯ ಎರಡು ಸಿನಿಮಾಗಳನ್ನು ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಒಂದು ಮುಂಗಾರು ಮಳೆ ಕೃಷ್ಣ ಅವರದ್ದು, ಮತ್ತೊಂದು ಚಿತ್ರವನ್ನು ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ.