ಚೀನಾ ಮೂಲದ ಬಿವೈಡಿ (BYD) ಕಂಪನಿಯು ಇಂದು ಬಹುನಿರೀಕ್ಷಿತ ಸೀಲ್ (Seal) ಸೆಡಾನ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 41 ಲಕ್ಷ ರೂ. ದಿಂದ 53 ಲಕ್ಷ ರೂ.ವರೆಗೆ ಇದೆ .
ಬಿವೈಡಿ ಸೀಲ್ ಕಾರನ್ನು ಗ್ರಾಹಕರು 1.25 ಲಕ್ಷ ರೂಪಾಯಿಗಳನ್ನು ನೀಡಿ ಬುಕ್ ಮಾಡಬಹುದು. ಮಾರ್ಚ್ 31, 2024 ಕ್ಕಿಂತ ಮೊದಲು ಬುಕ್ ಮಾಡುವವರಿಗೆ ಉಚಿತ ಹೋಮ್ ಚಾರ್ಜರ್ ಸ್ಥಾಪನೆ (Free Home Charger Installation), 3kW ಪೋರ್ಟಬಲ್ ಚಾರ್ಜಿಂಗ್ ಬಾಕ್ಸ್ (Portable Charging Box) ಮತ್ತು 6 ವರ್ಷಗಳ ರಸ್ತೆಬದಿ ನೆರವು (Roadside Assistance) ಮತ್ತು ಇನ್ನಿತರ ಹೆಚ್ಚುವರಿ ಸೇವೆಗಳನ್ನು ಕಂಪನಿ ನೀಡಲಿದೆ.
ಸೀಲ್ ಕಾರು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ – 61.44kWh ಮತ್ತು 82.56kWh. ಎರಡೂ ಬ್ಯಾಟರಿಗಳು BYD ಬ್ಲೇಡ್ ತಂತ್ರಜ್ಞಾನವನ್ನು (BYD Blade Technology) ಹೊಂದಿವೆ. ಚಿಕ್ಕ ಬ್ಯಾಟರಿಯನ್ನು ಹಿಂಭಾಗದ ಆಕ್ಸಲ್ ಮೇಲೆ ಒಂದೇ ಮೋಟಾರ್ನೊಂದಿಗೆ ಜೋಡಿಸಲಾಗಿದೆ. ಅದು 204hp ಮತ್ತು 310Nm ಟಾರ್ಕ್ ಉತ್ಪಾದಿಸುತ್ತದೆ ಮತ್ತು 510km (NEDC Cycle) ರೇಂಜ್ ನೀಡುತ್ತದೆ
82.5kWh ಬ್ಯಾಟರಿ ಹೊಂದಿರುವ ಸೀಲ್ RWD ಮತ್ತು AWD ಮಾದರಿಯಲ್ಲಿ ಲಭ್ಯವಿದೆ. ಒಂದೇ ಮೋಟಾರ್ ಹೊಂದಿರುವ RWD ಅವತರಣಿಕೆಯು 312hp ಪವರ್ ಮತ್ತು 360Nm ಟಾರ್ಕ್ ಉತ್ಪಾದಿಸುತ್ತದೆ. ಇದು 650 ಕಿಮೀ ರೇಂಜ್ ನೀಡುತ್ತದೆ. ಎರಡು ಮೋಟಾರ್ ಹೊಂದಿರುವ AWD ಅವತರಣಿಕೆಯು 530hp ಪವರ್ ಮತ್ತು 670Nm ಟಾರ್ಕ್ ಉತ್ಪಾದಿಸುತ್ತದೆ ಹಾಗು 580 ಕಿಮೀ. ರೇಂಜ್ ನೀಡುತ್ತದೆ. ಟಾಪ್ ವೇರಿಯಂಟ್ ಕಾರು 0-100 ಕಿಮೀ. ಸ್ಪೀಡ್ ತಲುಪಲು ಕೇವಲ 3.8 ಸೆಕೆಂಡ್ಸ್ ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.