ಅತಿಯಾದ ಒತ್ತಡದ ಜೀವನಶೈಲಿ, ಮಾನಸಿಕ ಖಿನ್ನತೆ, ಮಧ್ಯ ರಾತ್ರಿ ಕಳೆದರೂ ಕೂಡ ಮೊಬೈಲ್ ಕಂಪ್ಯೂಟರ್ ಗಳಲ್ಲಿ ನಿರತರಾಗಿರುವುದು, ಇದರ ಜೊತೆಗೆ ಕೆಲ ವೊಂದು ದುರಾಭ್ಯಾಸಗಳಿಂದಾಗಿ, ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಗಳು ಇಂದು ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇನ್ನು ಕೆಲವರು ರಾತ್ರಿ ಊಟ ಮಾಡಿ, ಬೇಗನೇ ಮಲಗಿದರೂ ಕೂಡ ನಿದ್ದೆ ಮಾತ್ರ ಹತ್ತಿರನೇ ಸುಳಿಯುವುದಿಲ್ಲ,
ಇದರಿಂದಾಗಿ ಮರುದಿನ ಬೆಳಗ್ಗೆ ಯಾವ ಕೆಲಸ ಕಾರ್ಯಗಳನ್ನು ಕೂಡ ಸರಿಯಾಗಿ ಮಾಡಲಾಗದೇ, ತುಂಬಾನೇ ಹೈರಾಣಾಗಿ ಬಿಡುತ್ತಾರೆ. ನಿದ್ದೆ ಪ್ರತೀ ಜೀವಿಯ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಹೀಗಾಗಿ ನಿದ್ದೆಯ ಸಮಸ್ಯೆಯನ್ನು ನಿವಾರಿಸಲು, ಈ ಲೇಖನದಲ್ಲಿ ಕೆಲವೊಂದು ಆಹಾರಗಳು ಹಾಗೂ ಪಾನೀಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ ಮುಂದೆ ಓದಿ..
ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನು ಬೆರೆಸಿ ಕುಡಿಯಿರಿ
ಬಹುದಿನಗಳಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ರಾತ್ರಿ ಸಮಯದಲ್ಲಿ ಮಲಗುವ ಮುನ್ನ, ಅಂದರೆ ರಾತ್ರಿ ಊಟ ವಾದ ಮೇಲೆ ಒಂದು ಲೋಟ ಉಗುರುಬೆಚ್ಚಗಿನ ಹಾಲಿಗೆ, ಒಂದು ಟೇಬಲ್ ಚಮಚ ಆಗುವಷ್ಟು ಜೇನುತುಪ್ ಪವನ್ನು ಮಿಶ್ರಣ ಮಾಡಿ ಕುಡಿದು ಮಲಗುವುದರಿಂದ,ನಿದ್ರೆಗೆ ಸಹಕಾರಿಯಾಗುವ ಹಾರ್ಮೋನ್ ದೇಹದಲ್ಲಿ ಬಿಡುಗಡೆ ಯಾಗುತ್ತದೆ. ಹೀಗೆ ಪ್ರತಿದಿನ ಇಂತಹ ಅಭ್ಯಾಸ ವನ್ನು ಮಾಡುವುದರಿಂದ ದಿನಕಳೆದಂತೆ, ನಿದ್ರೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ನಿಧಾನಕ್ಕೆ ಕಡಿಮೆಯಾಗುತ್ತದೆ.
ಮೆಗ್ನೀಸಿಯಮ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಿ
• ರಾತ್ರಿ ಮಲಗುವ ಸಮಯದಲ್ಲಿ ಮಿತ ಪ್ರಮಾಣದಲ್ಲಿ ಮೆಗ್ನೀಸಿಯಮ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವುದರಿಂದ, ನಿದ್ದೆ ಶೀಘ್ರವಾಗಿ ಆವರಿಸುತ್ತದೆ ಎಂದು, ತಜ್ಞರು ಕೂಡ ಹೇಳುತ್ತಾರೆ.
• ಉದಾಹರಣೆಗೆ ಆರೋಗ್ಯಕರ ಕೊಬ್ಬಿನ ಅಂಶ ಮತ್ತು ಮೆಗ್ನೀಸಿಯಮ್ ಅಂಶ ಅಪಾರ ಪ್ರಮಾಣದಲ್ಲಿ ಕಂಡು ಬರುವ ಬೆಣ್ಣೆಹಣ್ಣುಗಳು, ಬಾದಾಮಿ ಮತ್ತು ಗೋಡಂಬಿ ಬೀಜಗಳು, ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು, ಮುಂತಾದ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಬಾಳೆಹಣ್ಣು ತಿಂದು ಮಲಗಿ..
• ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನ ಜೊತೆಗೆ ಬಾಳೆ ಹಣ್ಣನ್ನು ಸೇವನೆ ಮಾಡುವುದರಿಂದ, ಮಲಗಿದ ಕೂಡಲೇ ನಿದ್ದೆ ಬಂದುಬಿಡುತ್ತದೆ ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ.
• ಹೀಗಾಗಿ ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದು ಮಲಗುವ ಅಭ್ಯಾಸ ಮಾಡಿಕೊಳ್ಳಿ. ಪ್ರಮುಖವಾಗಿ ಈ ಹಣ್ಣಿ ನಲ್ಲಿ ಕಂಡು ಬರುವ ಮೆಗ್ನೀಸಿಯಮ್ ಅಂಶವು ಒತ್ತಡ ನಿವಾರಣೆ ಮಾಡಿ, ಸ್ನಾಯುಗಳಿಗೆ ಆರಾಮ ನೀಡುವುದು. ಇನ್ನೂ ಮುಖ್ಯವಾಗಿ, ದೇಹದಲ್ಲಿ ಸೆರೊಟೊನಿನ್ ಮತ್ತು ಮೆಲಟೊನಿನ್ ಹಾರ್ಮೋನ್ ಮಟ್ಟವನ್ನು ಈ ಹಣ್ಣು ಹೆಚ್ಚಿಸಿ, ನಿದ್ರೆಗೆ ಸಹಕರಿಸುವುದು.
ಜೀರಿಗೆ ನೀರು
ಜೀರಿಗೆ ಕುದಿಸಿದ ನೀರು ಕೂಡ ಉತ್ತಮ ನಿದ್ದೆಗೆ ನೆರವಾಗುತ್ತದೆ. ವಿಶೇಷ ವಾಗಿ ಅಜೀರ್ಣ ಹುಳಿತೇಗು, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ನಿದ್ದೆ ಬಾರದೇ ಇದ್ದರೆ ಈ ವಿಧಾನ ಸೂಕ್ತವಾಗಿದೆ. ಹೀಗಾಗಿ ರಾತ್ರಿ ಊಟದ ಬಳಿಕ ಒಂದು ಲೋಟ ಜೀರಿಗೆ ಕುದಿಸಿದ ನೀರನ್ನು ಕುಡಿದು, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ, ಆ ಬಳಿಕ ಮಲಗುವ ಅಭ್ಯಾಸ ಮಾಡಿ ಕೊಳ್ಳಿ.
ಅರಿಶಿನ ಬೆರೆಸಿದ ಹಾಲು ಕುಡಿಯಿರಿ
• ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ, ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡುತ್ತದೆ. ಲಿವರ್ ನಲ್ಲಿರುವ ಕಲ್ಮಶಗಳು ನಿವಾರಣೆಯಾಗುತ್ತವೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಇವೆಲ್ಲವೂ ಶೀಘ್ರವಾಗಿ ಗಾಢ ನಿದ್ದೆ ಬರಲು ನೆರವಾಗುತ್ತವೆ.
• ಹೀಗಾಗಿ ಬಹಳ ದಿನಗಳಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳ ಲುತ್ತಿರುವವರು, ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಚಿಟಿಕೆ ಅರಿಶಿನ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
ಬಿಳಿ ಅನ್ನವನ್ನು ಊಟ ಮಾಡಿ
• ಬಿಳಿ ಅನ್ನವನ್ನು ಅನಾರೋಗ್ಯಕರ ಕಾರ್ಬೋಹೈಡ್ರೇಟ್ ಅಂಶ ಗಳು ಹೆಚ್ಚಾಗಿರುವುದರಿಂದ, ಪ್ರತಿದಿನ ಬಿಳಿ ಅನ್ನ ಹೆಚ್ಚಾಗಿ ಊಟ ಮಾಡು ವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಆದರೆ ಮಿತವಾಗಿ ಬಿಳಿ ಅನ್ನವನ್ನು ಊಟ ಮಾಡುವು ದರಿಂದ ಯಾವುದೇ ಸಮಸ್ಯೆ ಇಲ್ಲ.
• ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು, ರಾತ್ರಿ ಸಮ ಯದಲ್ಲಿ ಸ್ವಲ್ಪ ಅನ್ನ ಊಟ ಮಾಡುವುದು ಒಳ್ಳೆಯದು. ಯಾಕೆಂದ್ರೆ ಅನ್ನದಲ್ಲಿ ಕಂಡು ಬರುವ ಮೆಗ್ನೀಸಿಯಮ್ ಅಂಶವು ನಿದ್ರೆಗೆ ಸಹಕಾರಿ.
ಕೊನೆಯ ಮಾತು
• ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲ ಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು
• ರಾತ್ರಿ ಮಲಗುವ ಮುನ್ನ ಹಾಲು ಬೆರೆಸಿದ ಟೀ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಡಿ. ಇದರ ಬದಲಿಗೆ ಗಿಡ ಮೂಲಿಕೆಯ ಚಹಾ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
• ಮಲಗುವ ಮುನ್ನ ಮೂರು-ನಾಲ್ಕು ಹನಿ ಆಗುವಷ್ಟು ಲ್ಯಾವೆಂಡರ್ ಎಣ್ಣೆಯನ್ನು ಕೈಗೆ ಹಚ್ಚಿಕೊಂಡು, ಇದರ ಪರಿಮಳವನ್ನು ಆಸ್ವಾದಿಸಿ
• ಇನ್ನು ಆಯುರ್ವೇದ ಚಿಕಿತ್ಸೆಯ ಬಗ್ಗೆ ಹೇಳುವುದಾದರೆ, ಮಲ ಗುವ ಮುನ್ನ ಪಾದಗಳ ಭಾಗಕ್ಕೆ, ಎಣ್ಣೆಯನ್ನು ಹಚ್ಚಿ ಕೆಲವು ನಿಮಿಷಗಳವರೆಗೆ ಚೆನ್ನಾಗಿ ಮಸಾಜ್ ಮಾಡಬೇಕು. ಪ್ರತಿದಿನ ಚಂದ್ರ ಅನುಲೋಮ ಪ್ರಾಣಾಯಾಮ ಮಾಡಬೇಕು ಇವು ನಿದ್ರಾ ಹೀನತೆಯಂತಹ ಸಮಸ್ಯೆಯನ್ನು ಬಹಳ ಬೇಗನೇ ದೂರ ಮಾಡುತ್ತವೆ.
• ಸಂಜೆಯ ಸಮಯದಲ್ಲಿ ಕಾಫಿ ಅಥವಾ ಚಹಾ ಸೇವನೆ ಮಾಡುವ ಅಭ್ಯಾಸ ಬಿಡಬೇಕು.
• ಪ್ರತಿ ದಿನ ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸ ಮಾಡಿ ಕೊಳ್ಳಿ. ಮಲಗುವ ಒಂದು ಗಂಟೆ ಮುಂಚೆ ಯಾವುದೇ ಎಲೆ ಕ್ಟ್ರಾನಿಕ್ ಉಪಕರಣಗಳನ್ನು ಅಂದರೆ ಮೊಬೈಲ್, ಟಿವಿ ಇವುಗಳನ್ನು ದೂರ ಇರಿಸಿ.