ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಸಂಭ್ರಮ ಸಖತ್ ಜೋರಾಗಿ ನಡೆಯುತ್ತಿದೆ. ಮದುವೆಗೂ ಮುನ್ನ ಅದ್ದೂರಿಯಾಗಿ ಕಾರ್ಯಕ್ರಮಗಳು ಜರುಗುತ್ತಿದ್ದು ದೇಶ, ವಿದೇಶಗಳಿಂದ ಸೆಲೆಬ್ರಿಟಿಗಳು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಂಬಾನಿ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಗಾಯಕಿ ರಿಯಾನಾ ಹಾಡಿದ್ದು ಆಕೆಗೆ ಬರೋಬ್ಬರಿ 74 ಕೋಟಿ ಸಂಭಾವನೆ ನೀಡಲಾಗಿದೆ. ಇದೀಗ ಗಾಯಕಿ ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ್ದಾರೆ.
‘ಎಲ್ಲರಿಗೂ ಶುಭಸಂಜೆ. ಇಂದು ಇಲ್ಲಿರೋದಕ್ಕೆ ಖುಷಿ ಆಗುತ್ತಿದೆ. ನಾನು ಈವರೆಗೆ ಭಾರತಕ್ಕೆ ಬಂದಿರಲಿಲ್ಲ. ಅಂಬಾನಿ ಕುಟುಂಬಕ್ಕೆ ಧನ್ಯವಾದ. ಅನಂತ್ ಹಾಗೂ ರಾಧಿಕಾಗೆ ಧನ್ಯವಾದ. ಅವರಿಗೆ ಅಭಿನಂದನೆ’ ಎಂದು ವಿಡಿಯೋದಲ್ಲಿದೆ.
ಬಾರ್ಬೆಡೋಸ್ ದೇಶದವರಾದ ರಿಯಾನಾಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ರಿಯಾನಾ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಶ್ರೀಮಂತರ ಮದುವೆಗಳಲ್ಲಿ ಸ್ಟಾರ್ ಸಿಂಗರ್ಗಳು ಬಂದು ಪರ್ಫಾರ್ಮೆನ್ಸ್ ನೀಡೋದು ಕಾಮನ್. ಈ ರೀತಿ ಬರುವ ಸೆಲೆಬ್ರಿಟಿಗಳಿಗೆ ಅವರು ಭರ್ಜರಿ ಸಂಭಾವನೆ ನೀಡುತ್ತಿದ್ದಾರೆ. ಸಿಂಗರ್ ರಿಯಾನಾ ಅವರು ಕೇವಲ ಒಂದು ದಿನ ಸಂಗೀತ ಕಾರ್ಯಕ್ರಮ ನೀಡಲು 74 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ವಿಚಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.