ಶಿವಮೊಗ್ಗ: ವಿವಾಹಿತ ಮಹಿಳೆಗೆ ಅಪರಿಚಿತ ಯುವಕರಿಂದ ಬ್ಲೇಡ್ ನಿಂದ ಹಲ್ಲೆ ನಡೆದಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತ ಯುವಕರು ಬಂದು ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾರೆ. ಬಲಗೈ ತೋಳಿನ ಮೇಲೆ ಮಹಿಳೆಗೆ ಗಾಯವಾಗಿದೆ.
ಕುತ್ತಿಗೆ, ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ.? ಹಾಗಿದ್ರೆ ಮಲಗುವ ಶೈಲಿ ಚೇಂಜ್ ಮಾಡಿಕೊಳ್ಳಿ
ಹಲ್ಲೆಗೊಳಗಾದ ಮಹಿಳೆಯನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ನಾಜೀಮಾ (38) ಎಂದು ಗುರುತಿಸಲಾಗಿದೆ. ಮಹಿಳೆಯ ಬಲಗೈ ಬಲ ತೋಳಿನ ಮೇಲ್ಭಾಗಕ್ಕೆ ಬ್ಲೇಡ್ ನಿಂದ ಗಾಯಗಳಾಗಿದೆ. ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆ ನಡೆದಿರುವ ಬಗ್ಗೆ ಕಾರಣ ತಿಳಿಯಬೇಕಿದೆ.