ನೀವು ಏರ್ ಟೆಲ್, ಜಿಯೋ ಗ್ರಾಹಕರಾಗಿದ್ದರೆ ನಿಮಗೆ ಈ ಸುದ್ದಿ ಕೇಳಿ ಶಾಕ್ ಆಗಬಹುದು. ಇದುವರೆಗೂ ಕಡಿಮೆ ಬೆಲೆಗೆ ಕಾಲ್ ಹಾಗೂ ಇಂಟರ್ ನೆಟ್ ಸೌಲಭ್ಯ ನೀಡುತ್ತಿದ್ದ ಏರ್ ಟೆಲ್ ಹಾಗೂ ಜಿಯೋ ಇದೀಗ ಶುಲ್ಕ್ ಹೆಚ್ಚಳಕ್ಕೆ ಮುಂದಾಗಿವೆ. ಈ ಮೂಲಕ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತು ಖಂಡಿತ.
ಜನಪ್ರಿಯ ಭಾರ್ತಿ ಏರ್ಟೆಲ್ ಸಂಸ್ಥೆಯು ಶುಲ್ಕ ಏರಿಕೆ ಮಾಡಬಹುದು ಎಂದು ಏರ್ಟೆಲ್ನ ಅಧ್ಯಕ್ಷ ಸುನೀಲ್ ಮಿತ್ತಲ್ ತಿಳಿಸಿದ್ದಾರೆ. ಇತ್ತೀಚಿಗೆ ಎನ್ಡಿಟಿವಿ ಪ್ರಾಫಿಟ್ಗೆ ನೀಡಿದ ಸಂದರ್ಶನವೊಂದರಲ್ಲಿ, ಮಾತನಾಡಿದ ಅವರು ಮಾರುಕಟ್ಟೆಯನ್ನು ಸುಸ್ಥಿರವಾಗಿಡಲು ಸಂಸ್ಥೆಯು ಟೆಲಿಕಾಂ ದರಗಳನ್ನು ಹೆಚ್ಚಿಸಲಿದೆ ಎಂದಿದ್ದಾರೆ.
ಇನ್ನು ಪರಿಷ್ಕೃತ ದರಗಳಿಗೆ ನಿರ್ದಿಷ್ಟ ಕಾಲಮಿತಿಯ ಮಾಹಿತಿ ಅನ್ನು ಸುನೀಲ್ ಮಿತ್ತಲ್ ಬಹಿರಂಗಪಡಿಸಿಲ್ಲ. ಅದಾಗ್ಯೂ, ಪ್ರಸಕ್ತ – 2024 ರ ದ್ವಿತೀಯಾರ್ಧದಲ್ಲಿ ಟೆಲಿಕಾಂ ಶುಲ್ಕಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ತಿಂಗಳುಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ARPU) 208 ರೂ. ನಿಂದ 300 ರೂ. ಗೆ ಹೆಚ್ಚಿಸುವ ಗುರಿಯನ್ನು ಏರ್ಟೆಲ್ ಟೆಲಿಕಾಂ ಹೊಂದಿದೆ. ಅಲ್ಲದೇ ಭಾರ್ತಿ ಏರ್ಟೆಲ್ ಸಂಸ್ಥೆಯು ಭಾರತದಲ್ಲಿ ತನ್ನ 5G ಸೇವೆಗಳನ್ನು ನಿರಂತರವಾಗಿ ವಿಸ್ತರಿಸುತ್ತಾ ಸಾಗಿದೆ.
ದೇಶದ ಟೆಲಿಕಾಂ ವಲಯವು ಜಿಯೋ, ಏರ್ಟೆಲ್ ಹಾಗೂ ವಿ ಟೆಲಿಕಾಂಗಳು ಪ್ರಮುಖ ಸಂಸ್ಥೆಗಳಾಗಿ ಮುನ್ನಡೆದಿವೆ. ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ದೇಶದಲ್ಲಿ ತಮ್ಮ ಅನಿಯಮಿತ 5G ಟ್ರಾಯಲ್ಗಳನ್ನು ಶೀಘ್ರದಲ್ಲೇ ಕೊನೆ ಮಾಡಬಹುದು ಎಂದು ಇತ್ತೀಚಿನ ಟೆಲಿಕಾಂ ವರದಿ ತಿಳಿಸಿದೆ.