ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹೆಸರನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಬಿಬಿಎಂಪಿ ಹಲವಾರು ಯೋಜನೆಗಳನ್ನು (BBMP Projects) ಹಮ್ಮಿಕೊಂಡಿದೆ. ಬ್ರ್ಯಾಂಡ್ ಬೆಂಗಳೂರು – ವೈಬ್ರೆಂಟ್ ಬೆಂಗಳೂರು ಯೋಜನೆಯಡಿ 250 ಮೀಟರ್ ಎತ್ತರದ ಸ್ಕೈ-ಡೆಕ್ (Skydeck) ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಇದರ ಒಟ್ಟು ವೆಚ್ಚ 350 ಕೋಟಿ ಎಂದು ಅಂದಾಜಿಸಲಾಗಿದೆ.
Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?
ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಸಹಕಾರದೊಂದಿಗೆ ಈ ಸ್ಕೈ ಡೆಕ್ ನಿರ್ಮಾಣ ಮಾಡಲಿದೆ. ಯೋಜನೆ ಪೂರ್ಣಗೊಂಡ ಬಳಿಕ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಸ್ಕೈ-ಡೆಕ್ ಪಾತ್ರವಾಗಲಿದೆ.
ಬೈಯಪ್ಪನಹಳ್ಳಿ ಬಳಿಯ ಎನ್ಜಿಇಎಫ್ ಅಥವಾ ಸೋಪ್ ಫ್ಯಾಕ್ಟರಿಯ ಭೂಮಿಯಲ್ಲಿ ಈ ಸ್ಕೈ-ಡೆಕ್ ನಿರ್ಮಾಣ ಮಾಡುವ ಪ್ರಸ್ತಾಪವಿತ್ತು. ಇದರಲ್ಲಿ ಬಹುತೇಕ ಎನ್ಜಿಎಫ್ ಭೂಮಿಯೇ ಯೋಜನೆಗೆ ಆಯ್ಕೆಯಾಗಿದೆ. ಎನ್ಜಿಎಫ್ 105 ಎಕರೆ ವಿಸ್ತೀರ್ಣದಲ್ಲಿದ್ದು ಇದರಿಂದ 10 ಎಕರೆ ಪ್ರದೇಶವನ್ನು ಸ್ಕೈಡೆಕ್ ಯೋಜನೆಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.