ಮೊಟ್ಟೆ ಬೇಯಿಸುವಾಗ ಒಡೆದು ಹೋಗುವುದನ್ನು ತಪ್ಪಿಸಲು ಈ ಟ್ರಿಕ್ಸ್ ಫಾಲೋ ಮಾಡಿ. ಹೀಗಾಗಿ ಹೆಚ್ಚಿನವರು ಬೇಯಿಸಿದ ಮೊಟ್ಟೆಯನ್ನು ತಿನ್ನಲು ಇಷ್ಟ ಪಡುತ್ತಾರೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ 6, ಬಿ 12 ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ಫೋಲೇಟ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹೀಗಾಗಿ ದಿನಕ್ಕೊಂದು ಮೊಟ್ಟೆಯನ್ನು ಸೇವನೆ ಮಾಡುವುದರಿಂದ ಆರೋಗ್ಯದ ಹಲವು ಪ್ರಯೋಜನಗಳು ಅಧಿಕವಾಗಿದೆ.
* ಎರಡು ಮೊಟ್ಟೆಗಳನ್ನು ಕುದಿಸಲು ದೊಡ್ಡ ಗಾತ್ರದ ಪಾತ್ರೆಯನ್ನು ಆರಿಸಿಕೊಳ್ಳುವುದನ್ನು ಮರೆಯಬೇಡಿ. ಅಗಲವಾದ ಪಾತ್ರೆಗಳನ್ನು ತೆಗೆದುಕೊಂಡರೆ ಮೊಟ್ಟೆ ಕುದಿಯುವಾಗ ಒಂದಕ್ಕೊಂದು ಢಿಕ್ಕಿ ಹೊಡೆದು ಒಡೆದುಹೋಗುವುದಿಲ್ಲ.
* ಮೊಟ್ಟೆ ಬಿರುಕು ಬಿಡುತ್ತಿದ್ದರೆ ಉಪ್ಪನ್ನು ಹಾಕಿ. ಈ ಮೊಟ್ಟೆಗಳನ್ನು ಕುದಿಸುವಾಗ ಒಂದು ಚಮಚ ಉಪ್ಪು ಬೆರೆಸುವುದರಿಂದ ಒಡೆದು ಹೋಗುವುದಿಲ್ಲ. ಅದರೊಂದಿಗೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
* ಹೆಚ್ಚಿನವರು ರೆಫ್ರಿಜರೇಟರ್ ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿಡುತ್ತಾರೆ. ಅಡುಗೆಗೆ ಬೇಕಾದಾಗ ರೆಫ್ರಿಜರೇಟರ್ ನಿಂದ ತೆಗೆದು ಬಳಸುತ್ತಾರೆ. ಆದರೆ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟಿದ್ದರೆ ಅದನ್ನು ಹೊರಗೆ ತೆಗೆದು ಹದಿನೈದು ಇಪ್ಪತ್ತು ನಿಮಿಷಗಳು ಬಿಟ್ಟು ಬಳಿಕವೇ ಬೇಯಿಸಬೇಕು. ನೇರವಾಗಿ ತೆಗೆದು ಬೇಯಿಸಿದರೆ ಮೊಟ್ಟೆ ಒಡೆದು ಹೋಗುವ ಸಾಧ್ಯತೆಯೇ ಹೆಚ್ಚು.
* ಮೊಟ್ಟೆಯನ್ನು ಬೇಯಿಸುವಾಗ ಹೆಚ್ಚು ಉರಿಯಲ್ಲಿ ಕುದಿಸುವುದನ್ನು ತಪ್ಪಿಸಿ. ಇದರಿಂದ ಮೊಟ್ಟೆ ಒಡೆದು ಹೋಗುತ್ತದೆ. ಹೀಗಾಗಿ ಮಧ್ಯಮ ಉರಿಯಲ್ಲಿ ಬೇಯಿಸುವುದು ಉತ್ತಮ.
ನೀರಿಗೆ ವಿನೆಗರ್ ಹಾಕಿ ಮೊಟ್ಟೆಗಳನ್ನು ಕುದಿಸಿದರೆ ಮೊಟ್ಟೆಯು ಬಿರುಕು ಬಿಡುವುದನ್ನು ತಪ್ಪಿಸಬಹುದು. ವಿನೆಗರ್ ಬಳಸುವುದರಿಂದ ಮೊಟ್ಟೆಯ ಬಿಳಿಭಾಗದಲ್ಲಿರುವ ಪ್ರೋಟೀನ್ಗಳು ವೇಗವಾಗಿ ಹೆಪ್ಪುಗಟ್ಟುತ್ತದೆ. ಹೀಗಾಗಿ ಮೊಟ್ಟೆಯ ಹೊರಭಾಗವು ಒಡೆಯುವುದಿಲ್ಲ.
ಮೊಟ್ಟೆಗಳನ್ನು ನೀರಿಗೆ ಹಾಕಿ ಕುದಿಸುವಾಗ ಐಸ್ ಕ್ಯೂಬ್ಗಳನ್ನು ಬಳಸುವುದು ಉತ್ತಮ. ಅದಲ್ಲದೆ, ಅದನ್ನು ಬೇಯಿಸಿದ ನಂತರದಲ್ಲಿ ಕನಿಷ್ಠ 3 ನಿಮಿಷಗಳ ಕಾಲ ತಣ್ಣಗಾಗಲು ಐಸ್ ಕ್ಯೂಬ್ ಗಳಿರುವ ಪಾತ್ರೆಗೆ ವರ್ಗಾಯಿಸುವುದರಿಂದ ಮೊಟ್ಟೆ ಸಿಪ್ಪೆ ತೆಗೆಯಲು ಸುಲಭವಾದ ವಿಧಾನವಾಗಿದೆ.