ಶಿವಮೊಗ್ಗ: ಮಂಗನ ಖಾಯಿಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. 57 ವರ್ಷದ ನಾಗಮ್ಮ ಮೃತ ಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಭAದಿಸಿದAತೆ ಶಿವಮೊಗ್ಗದಲ್ಲಿ ಮಾತನಾಡಿದ ಡಿ ,ಎಚ್ ಓ ಡಾ, ರಾಜೇಶ್ ಮಹಿಳೆಗೆ ಫೆ 1 ರಂದು ಜ್ವರ ಕಾಣಿಸಿಕೊಂಡಿದ್ದರಿAದ ಫೆ 3 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಮಹಿಳೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವರನ್ನು ಮಣಿಪಾಲ್ ಕೆ ಎಂ ಸಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಅಲ್ಲಿ ಅವರ ಸ್ಥಿತಿ ಚಿಂತಾಜನಕವಾದ ಹಿನ್ನಲೆ ಎರಡು ದಿನಗಳ ಹಿಂದೆ ಪುನಃ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು, ದುರಾದೃಷ್ಟವಶಾತ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದರು. ಹಾಗೆಯೇ ಕೆ ಎಫ್ ಡಿ ಹೆಚ್ಚಾದ ಹಿನ್ನಲೆ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಕ್ರಮವಹಿಸಲಾಗಿದೆ.
ಸುಕನ್ಯಾ ಸಮೃದ್ಧಿ ಖಾತೆ ಬಗ್ಗೆ ಬಿಗ್ ಅಪ್ ಡೇಟ್: ಈ ಕೆಲಸ ಮಾಡದಿದ್ರೆ ನಿಮ್ಮ ಖಾತೆ ನಿಷ್ಕ್ರೀಯ ಗ್ಯಾರಂಟಿ!
ನಮ್ಮ ಸಿಬ್ಬಂದಿಗಳು ನಿರಂತರವಾಗಿ ಕೆ ಫ್ ಡಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಮಂಗನ ಖಾಯಿಲೆ ಹೆಚ್ಚಾಗಿದ್ದು, ಉತ್ತರ ಕನ್ನಡ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಂದೊAದು ಅಂದರೆ ಈ ಬಾರಿ ಮಂಗನ ಕಾಯಿಲೆಯಿಂದ 3 ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.