ಮನೆಯಲ್ಲಿ ವಿದ್ಯುತ್ ಕಡಿತಗೊಂಡರೆ, ಫ್ಯಾನ್, ಎಸಿ ಇಲ್ಲದಿದ್ದರೆ ಬಿಸಿಲಿನಲ್ಲಿ ಹೊರಗೆ ಹೋದಾಗ ಧಾರಾಕಾರವಾಗಿ ಬೆವರುತ್ತೇವೆ. ಆದರೆ, ಕೆಲವು ಮಾರಣಾಂತಿಕ ಕಾಯಿಲೆಗಳಿದ್ದರೆ, ರಾತ್ರಿಯಲ್ಲಿಯೂ ವಿಪರೀತ ಬೆವರುವಿಕೆ ಆಗುತ್ತವೆ. ಈ ಮೂಲಕ ದೇಹದಲ್ಲಿನ ಬದಲಾವಣೆಗಳು ಬೆವರಿನ ರೂಪದಲ್ಲಿ ಹೊರಬರುತ್ತವೆ.
ಅಲ್ಲದೆ, ಜೀವನಶೈಲಿ ಕೆಟ್ಟದ್ದಾಗಿದ್ದರೆ, ರಾತ್ರಿ ಮಲಗುವಾಗ ಬೆವರು ಬರುತ್ತದೆ. ಇದಕ್ಕೆ ವಿಶೇಷ ಗಮನ ಬೇಕು. ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಇನ್ನು ಮುಟ್ಟಿನ ನಂತರ ಮಹಿಳೆಯರು ರಾತ್ರಿಯಲ್ಲಿ ವಿಪರೀತವಾಗಿ ಬೆವರು ಮಾಡುತ್ತಾರೆ. ನಮ್ಮ ದೇಹದಲ್ಲಿನ ಅಸಹಜ ಹಾರ್ಮೋನುಗಳ ಬದಲಾವಣೆಯಿಂದ ಇದು ಸಂಭವಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾದರೂ ಸಹ, ರಾತ್ರಿಯಲ್ಲಿ ಬೆವರುವಿಕೆ ಸಂಭವಿಸಬಹುದು
ರಾತ್ರಿ ಬೆವರುವಿಕೆಗೆ ಟಿಬಿ ಸಹ ಕಾರಣವಾಗಬಹುದು. ಟಿಬಿ ಕಾಯಿಲೆ ಶ್ವಾಸಕೋಶದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಈ ರೋಗ ಪೀಡಿತರು ರಾತ್ರಿಯಲ್ಲಿ ಹೆಚ್ಚು ಬೆವರುತ್ತಾರೆ. ಕೆಲವರಿಗೆ ಹೃದ್ರೋಗ ಸಮಸ್ಯೆಗಳಿದ್ದರೆ ಈ ರೀತಿ ಬೆವರುತ್ತಾರೆ. ಅದಕ್ಕಾಗಿ ಆದಷ್ಟು ಶೀರ್ಘವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ರಾತ್ರಿಯಲ್ಲಿ ಹೆಚ್ಚು ಬೆವರುವುದು ಕ್ಯಾನ್ಸರ್ನ ಲಕ್ಷಣಗಳಲ್ಲಿಯೂ ಒಂದು. ಮಲಗಿರುವಾಗ ಕಾಣಿಸಿಕೊಳ್ಳುವ ಈ ರೋಗಲಕ್ಷಣಗಳನ್ನು ಅಪಾಯಕಾರಿ ರೋಗ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಯಾವುದೇ ರೋಗಲಕ್ಷಣಗಳು 15 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.