ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾ ಅವರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದು ಎ.ವಿ.ರಾಜುಗೆ ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅಲ್ಲದೆ ಎ.ವಿ ರಾಜು ವಿರುದ್ಧ ಕಾನೂನು ಸಮರಕ್ಕೆ ನಟಿ ಮುಂದಾಗಿದ್ದಾರೆ.
ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್ಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಾಜು ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟಾçನಿಕ್ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ.ವಿ ರಾಜು ಮತ್ತೆ ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಶಾ ವಾರ್ನಿಂಗ್ ಕೊಟ್ಟಿದ್ದಾರೆ.
ರಾಜು ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದಾರೆ.