ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಾಗ ತಮ್ಮ ಪ್ರೀತಿ ಪ್ರೇಮ ಪ್ರಣಯದ ಕುರಿತು ಸುದ್ದಿಯಾಗುತ್ತಿರುತ್ತಾರೆ. ಇದೀಗ ಪುಟಿನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ರಷ್ಯಾ ಮಾಧ್ಯಮಗಳು ವರದಿ ಮಾಡಿದ್ದು ಲಂಡನ್ನಲ್ಲಿ ಅಧ್ಯಯನ ಮಾಡಿದ ಹುಡುಗಿಯ ನಡುವೆ ಸದ್ದಿಲ್ಲದೆ ಕುಚು ಕುಚು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪುಟಿನ್ ಪ್ರೀತಿಯಲ್ಲಿ ಬಿದ್ದಿರುವುದು ಎಕಟೆರಿನಾ ಕಟ್ಯಾ ಮಿಜುಲಿನಾ ಎಂಬ ಮಹಿಳೆಯ ಜೊತೆ. ಈಕೆ ಪುಟಿನ್ ಗಿಂತ 32 ವರ್ಷ ಚಿಕ್ಕವರು. ಈಕೆ ರಷ್ಯಾದ ಸೇಫ್ ಇಂಟರ್ನೆಟ್ ಲೀಗ್ನ ಮುಖ್ಯಸ್ಥರಾಗಿದ್ದಾರೆ. ಕಟ್ಯಾ ಪುಟಿನ್ ಬೆಂಬಲಿಗ ಮತ್ತು ಉಕ್ರೇನ್ ವಿರೋಧಿ ಸೆನೆಟರ್ನ ಮಗಳು. ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ರಷ್ಯಾದಲ್ಲಿ, ಪುಟಿನ್ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಅಲೀನಾ ಕಬೇವಾ ನಡುವೆ ಸಂಬಂಧವಿತ್ತು. ಆಕೆಗೆ ಮಕ್ಕಳಿದ್ದಾರೆ ಮತ್ತು ಅವರು ಪುಟಿನ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.
ಆದ್ರೆ, ಇದೀಗ ಪುಟಿನ್ ಹೊಸ ಅಫೇರ್ ಸುದ್ದಿ ರಷ್ಯಾದ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಕಟ್ಯಾ ಸೆನೆಟರ್ ಎಲೆನಾ ಮಿಜುಲಿನಾ ಅವರ ಮಗಳು. ಉಕ್ರೇನಿಯನ್ ಚಾನೆಲ್ ಪ್ರಕಾರ, ರಷ್ಯಾದ ಮಾನವ ಹಕ್ಕುಗಳ ಪ್ರಚಾರಕ ಓಲ್ಗಾ ರೊಮಾನೋವಾ ಹೇಳುವಂತೆ ‘ಕಟ್ಯಾ ಮಿಜುಲಿನಾ ಅವರು ಪುಟಿನ್ ಅವರ ಆಯ್ಕೆಯಾಗಿದ್ದಾರೆ. ಅವರು ಯಾವಾಗಲೂ ಈ ‘ಬಾರ್ಬಿ’ ಅನ್ನು ಇಷ್ಟಪಡುತ್ತಾರೆ. ಪುಟಿನ್ ಅವರಿಗೆ 71 ವರ್ಷ ಮತ್ತು ಕಟ್ಯಾ ಅವರಿಗೆ 39 ವರ್ಷ ಎಂದು ಅವರು ಹೇಳಿದರು.
ಪುಟಿನ್ ಅವರ ದೀರ್ಘಕಾಲದ ಒಡನಾಡಿ ಅಲೀನಾ ಕಬೇವಾ ಅವರಂತೆ ಅವರು ಸಾಂಪ್ರದಾಯಿಕ ಮೌಲ್ಯಗಳ ಪರವಾಗಿದ್ದಾರೆ. ಕಟ್ಯಾ 2004 ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ನಿಂದ ಪದವಿ ಪಡೆದರು. ಈಕೆ ಕಲೆ, ಇತಿಹಾಸ ಮತ್ತು ಇಂಡೋನೇಷಿಯನ್ ಭಾಷೆಯಲ್ಲಿ ಪದವಿ ಪಡೆದಿದ್ದಾರೆ. ಇದರ ಹೊರತಾಗಿ, ಅವರು ಚೀನಾಕ್ಕೆ ಭೇಟಿ ನೀಡುವ ರಷ್ಯಾದ ನಿಯೋಗದಲ್ಲಿ ಅನುವಾದಕರಾಗಿಯೂ ಕೆಲಸ ಮಾಡಿದ್ದಾರೆ.