ಮಿತಿಗಿಂತ ಹೆಚ್ಚಾಗಿ ನಿಂಬೆ ನೀರು ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ನಿಂಬೆ ನೀರು ಕುಡಿಯುವುದರಿಂದ ಅಜೀರ್ಣದಂತಹ ಸಮಸ್ಯೆಗಳಿಂದ ದೂರವಿರಬಹುದು ಹಾಗೂ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೆಂದು ಮಿತಿಗಿಂತ ಹೆಚ್ಚಾಗಿ ನಿಂಬೆ ನೀರು ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು.
ನಿಂಬೆಹಣ್ಣುಗಳಲ್ಲಿ ಸಿಟ್ರಸ್ ಅಂಶ ಸಾಕಷ್ಟಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಹಲ್ಲಿನ ಸೂಕ್ಷ್ಮತೆ ನಾಶವಾಗುತ್ತದೆ. ಹಾಗಾಗಿ ನಿಂಬೆರಸವನ್ನು ಸೇವಿಸಿದ ಬಳಿಕ ಹಲ್ಲುಜ್ಜುವುದು ಒಳ್ಳೆಯದು. ಅಥವಾ ನಿಂಬೆರಸದೊಂದಿಗೆ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಮುಖ್ಯ.
ಸಿಟ್ರಸ್ ಹಣ್ಣುಗಳು ಮೈಗ್ರೇನ್ ಗೆ ಕಾರಣವಾಗುತ್ತದೆ. ಇದರಿಂದ ತಲೆನೋವು ಹೆಚ್ಚಬಹುದು. ಅತಿಯಾದ ನಿಂಬೆರಸ ಸೇವನೆಯಿಂದ ಎದೆ ಉರಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವವರು ನಿಂಬೆರಸದಿಂದ ದೂರವಿದ್ದಷ್ಟು ಒಳ್ಳೆಯದು.
ನಿಂಬೆರಸ ಅತಿಯಾದ ಸೇವನೆಯಿಂದ ಬಾಯಿ ಹುಣ್ಣು ಕಾಣಿಸಿಕೊಳ್ಳಬಹುದು. ತರಕಾರಿ ಅಥವಾ ಯಾವುದೇ ವಸ್ತುವನ್ನು ಬೇಯಿಸುವಾಗ ನಿಂಬೆರಸ ಹಿಂಡುವುದರಿಂದ ಅದರ ನಿಜವಾದ ಲಾಭ ದೊರೆಯದೆ ಹೋಗಬಹುದು. ಹಾಗಾಗಿ ಪಾನೀಯ ಇಲ್ಲವೇ ಸಲಾಡ್ ಗಳಲ್ಲಿ ಮಾತ್ರ ಅದನ್ನು ಬಳಸಿ ಎನ್ನಲಾಗಿದೆ.