ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಕೆಲವು ಟಿ20 ಲೀಗ್ಗಳಲ್ಲಿ ಆಡುತ್ತಿದ್ದಾರೆ. ಇತ್ತೀಚಿಗೆ ಐಎಲ್ಟಿ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ ಫ್ರಾಂಚೈಸಿ ಎಂಐ ಎಮಿರೇಟ್ಸ್ ಪರ ಆಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಒಂದೇ ಓವರ್ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್ ಅಬ್ಬರಕ್ಕೆ ಬಾಬರ್ ತಂಡಕ್ಕೆ ಹೀನಾಯ ಸೋಲು ಕಂಡಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ 9ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ನಡೆಯುತ್ತಿದೆ. ಬುಧವಾರ ನಡೆದ ಲೀಗ್ನ ಆರನೇ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ ತಂಡ 154 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಕರಾಚಿ ಕಿಂಗ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ತಂಡದ ಪರ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಒಂದೇ ಓವರ್ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ವಾಸ್ತವವಾಗಿ, ಪೇಶಾವರ್ ಝಲ್ಮಿ ತಂಡದ ವಕಾರ್ ಸಲಾಮ್ಖೈಲ್ 15 ನೇ ಓವರ್ ಬೌಲ್ ಮಾಡುವ ಜವಬ್ದಾರಿ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಕೀರಾನ್ ಪೊಲಾರ್ಡ್, ಓವರ್ನ ಮೊದಲ ಎಸೆತದಿಂದಲೇ ದಾಳಿ ನಡೆಸಿದರು. ಪೊಲಾರ್ಡ್ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಎರಡನೇ ಎಸೆತದಲ್ಲಿ ಸಿಕ್ಸರ್, ಮೂರನೇ ಎಸೆತದಲ್ಲಿ ಬೌಂಡರಿ ಮುಂದಿನ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ ಪೊಲಾರ್ಡ್ ಸಿಂಗಲ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಮೂಲಕ ಪೊಲಾರ್ಡ್ ಒಂದು ಓವರ್ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿದರು. ಅಂತಿಮವಾಗಿ ಪೊಲಾರ್ಡ್ 21 ಎಸೆತಗಳಲ್ಲಿ 4 ಬೌಂಡರಿ ಮತ್ತು ಸಿಕ್ಸರ್ಗಳ ಸಹಾಯದಿಂದ ಅಜೇಯ 49 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಪ್ರಸ್ತುತ ವಿವಿದ ದೇಶಗಳಲ್ಲಿ ಟಿ20 ಲೀಗ್ನಲ್ಲಿ ಬಾಗವಹಿಸುತ್ತಿರುವ ಕೀರಾನ್ ಪೊಲಾರ್ಡ್ ಐಪಿಎಲ್ಗೆ ಮಾತ್ರ ವಿದಾಯ ಹೇಳಿದ್ದಾರೆ.